ಇ. ಅಹ್ಮದ್‌ರ ಚಿಕಿತ್ಸೆಯ ವಿವರ ಪಡೆಯಲು ಪುತ್ರಿಯಿಂದ ಕಾನೂನು ಹೋರಾಟ
.gif)
ದುಬೈ,ಮಾ.2: ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಇ. ಅಹ್ಮದ್‌ರಿಗೆ ಕೊನೆಹಂತದಲ್ಲಿ ನೀಡಿದ ಚಿಕಿತ್ಸೆ ಕುರಿತ ವಾಸ್ತವಿಕತೆಗಳನ್ನು ತಿಳಿಯಲಿಕ್ಕಾಗಿ ಅವರ ಪುತ್ರಿ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಭಾರತದಲ್ಲಿ ರೋಗಿಗಳಿಗೆ ಅರಿಯುವ ಹಕ್ಕಿಗಾಗಿ ಕಾನೂನು ನಿರ್ಮಾಣಕ್ಕೂ ಪ್ರಯತ್ನಗಳನ್ನೂ ಇದರೊಂದಿಗೆ ಅವರು ನಡೆಸಲಿದ್ದಾರೆ.
ಮುಸ್ಲಿಂ ಲೀಗ್ ನಾಯಕತ್ವ, ಸಂಬಂಧಿಕರೆಲ್ಲರ ಸಹಾಯ ಈ ಕಾನೂನು ಹೋರಾಟಕ್ಕೆ ಇದೆ ಎಂದು ಡಾ. ಫೌಝಿಯ ಶೇರ್ಷಾದ್ ಹೇಳಿದ್ದಾರೆ.ಪ್ರೀತಿಯ ತಂದೆಗೆ ನೀಡಿದ ಕೊನೆಯ ಗಂಟೆಗಳ ಚಿಕಿತ್ಸೆ ಹಿಂಸೆಯಾಗಿ ಮಾರ್ಪಟ್ಟಿದೆ ಎಂಬುದು ಸ್ಪಷ್ಟ. ಪಾರ್ಲಿಮೆಂಟ್ ಸದಸ್ಯನಿಗೆ ದಿಲ್ಲಿಯ ಪ್ರಸಿದ್ಧ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಈ ಹಿಂಸೆ ಅನುಭವಿಸಬೇಕಾಗಿ ಬಂತು.
ಹಾಗಿದ್ದರೆ ಭಾರತದ ಜನಸಾಮಾನ್ಯರ ಸ್ಥಿತಿಯೇನು? ಎಂದು ಈಗ ತಾನು ಚಿಂತಿಸುತ್ತಿದ್ದೇನೆಂದು ಡಾ. ಫೌಝಿಯಾರ ಪತಿ ಡಾ. ಬಾಬು ಶೇರ್ಷಾದ್ ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯನ್ನು ನಿಕಟ ಸಂಬಂಧಿಕರಿಗೂ ರೋಗಿಗೂ ತಿಳಿಯುವ ಹಕ್ಕು ಇದೆ. ಆ ಹಕ್ಕಿಗಾಗಿ ಹೋರಾಟ ನಡೆಸುವ ಹೊಣೆಯನ್ನು ತಂದೆಯ ಮರಣ ತನಗೆ ವಹಿಸಿಕೊಟ್ಟಿದೆಯೆಂದು ಈಗ ದುಬೈ ಹೆಣ್ಣ್ಮಕ್ಕಳ ವ ಹೆಣ್ಣ್ಮಕ್ಕಳ ವೈದ್ಯಕೀಯ ಕಾಲೇಜ್ ನ ಪೆಥಾಲಾಜಿ ವಿಭಾಗದ ಮುಖ್ಯಸ್ಥೆ ಮತ್ತು ಇನ್ಸ್‌ಟಿಟ್ಯೂಷನ್ ಇಫ್ಕ್‌ಟಿವ್‌ನೆಸ್ ನಿರ್ದೇಶಕಿಯಾದ ಡಾ.ಫೌಝಿಯಾ ಹೇಳಿದ್ದಾರೆ.
ಚಿಕಿತ್ಸೆಯ ವಿವರಗಳನ್ನು ನೀಡಬೇಕೆಂದು ಆಗ್ರಹಿಸಿ ಆಸ್ಪತ್ರೆಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಇದನ್ನು ಮಾಹಿತಿಹಕ್ಕು ಮೂಲಕ ಅರ್ಜಿಹಾಕಿ ಕೇಳಿದ್ದೇನೆ. ಪ್ರಧಾನಿ, ಲೋಕಸಭಾ ಸ್ಪೀಕರ್, ಕೇಂದ್ರ ಸಚಿವರಿಗೆ ಹೀಗೆ ತಿಳಿದವರೆಲ್ಲರಿಗೂ ದೂರು ನೀಡಿದ್ದೇನೆ. ಆದರೆ ಯಾರೂ ತನಗೆ ಉತ್ತರಿಸಿಲ್ಲ ಎಂದು ಪೌಝಿಯಾ ತಿಳಿಸಿದ್ದಾರೆ. ಆದ್ದರಿಂದ ತಾನು ಕಾನೂನು ಹೋರಾಟಕ್ಕೆ ಇಳಿಯುತ್ತಿದ್ದೇನೆ.
ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕಾನೂನಿನಲ್ಲಿ ತಂದೆಗೆ ಭಾರೀ ವಿಶ್ವಾಸವಿತ್ತು. ಆದ್ದರಿಂದ ಚಿಕಿತ್ಸೆಯ ಮಾಹಿತಿ ಪಡೆಯಲು ಗರಿಷ್ಠ ಪ್ರಯತ್ನ ನಡೆಸುವುದಾಗಿ ಅವರು ಹೇಳಿದ್ದಾರೆ. ಸತ್ಯ ವಿಜಯಿಯಾಗುತ್ತದೆ ಎಂದು ತನಗೆ ವಿಶ್ವಾಸ ಇದೆ. ನಷ್ಟಪರಿಹಾರಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ಮಾನವೀಯತೆ ಇರುವ ಒಬ್ಬ ವೈದ್ಯರಾದರೂ ಅಲ್ಲಿರಬಹುದು. ಅವರ ಮೂಲಕ ಸತ್ಯ ಬಹಿರಂಗವಾಗಬಹುದು ಎಂದು ಡಾ. ಫೌಝಿಯಾ ಅಭಿಪ್ರಾಯಪಟ್ಟಿದ್ದಾರೆಂದು ವರದಿ ತಿಳಿಸಿದೆ.







