ಗ್ರೈಂಡರ್‌ಗೆ ದಾವಣಿ ಸಿಲುಕಿ ಗೃಹಿಣಿ ಸಾವು
.jpg)
ಕಾಸರಗೋಡು, ಮಾ..2: ಗ್ರೈಂಡರ್‌ಗೆ ದಾವಣಿ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಶಿರಿಯಾ ದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ಆಯಿಷತ್ ಮುನೈಫಾ ( 22) ಎಂದು ಗುರುತಿಸಲಾಗಿದೆ.
ಮುನೈಫಾ ಗ್ರೈಂಡರ್‌ನಲ್ಲಿ ಅಕ್ಕಿ ಕಡೆಯುತ್ತಿದ್ದಾಗ ಗ್ರೈಂಡರ್‌ಗೆ ದಾವಣಿ ಸಿಲುಕಿ ನಂತರ ಅದು ಕುತ್ತಿಗೆಗೆ ಬಿಗಿದು ಈ ಘಟನೆ ನಡೆದಿದೆ.
ಕೂಡಲೇ ಮನೆಯವರು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ . ಒಂದೂವರೆ ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು . ಪತಿ ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದರು.
ಕುಂಬಳೆ ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
Next Story





