ಉಳ್ಳಾಲ: ಸರ್ವಧರ್ಮ ಸಮನ್ವಯ ಪ್ರತಿಷ್ಠಾನಕ್ಕೆ ಆಯ್ಕೆ

ಮಂಗಳೂರು, ಮಾ.2: ಉಳ್ಳಾಲದಲ್ಲಿ ಶಾಂತಿ-ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಸರ್ವ ಧರ್ಮೀಯ ಮುಖಂಡರನ್ನು ಒಳಗೊಂಡ 'ಸರ್ವಧರ್ಮ ಸಮನ್ವಯ ಪ್ರತಿಷ್ಠಾನ' ವನ್ನು ಅಸ್ತಿತ್ವಕ್ಕೆ ತರಲಾಗಿದೆ. ವಿಶೇಷವೆಂದರೆ ಈ ಸಮಿತಿಗೆ ಅಧ್ಯಕ್ಷರಿಲ್ಲ. ಆದರೆ ಮೂರು ಧರ್ಮೀಯರ ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ.
ಸಂಚಾಲಕರಾಗಿ ಬಾಬು ಬಂಗೇರ, ಅಫ್ತರ್ ಹುಸೈನ್, ಪಿಯೂಶ್ ಮೊಂತೆರೋ, ಗೌರವ ಸಲಹೆಗಾರರಾಗಿ ಉಳ್ಳಾಲ ದರ್ಗಾ ಅಧ್ಯಕ್ಷರಾಗಿ ಅಬ್ದುರ್ರಶೀದ್ ಉಳ್ಳಾಲ, ಸಚಿವ ಯು.ಟಿ.ಖಾದರ್, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಭರತ್ ಕುಮಾರ್, ಸದಾನಂದ ಬಂಗೇರ ಹಾಗೂ ಠಾಣಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ.
ಸಹ ಸಂಚಾಲಕರಾಗಿ ಪ್ರೇಮನಾಥ ಪುತ್ರನ್, ಮುಹಮ್ಮದ್ ಹನೀಫ್ ಕೋಟೆಪುರ, ವಿಕ್ಟರ್ ಡಿಸೋಜ ನಿತ್ಯಾಧರ್ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಯು.ಪಿ. ಅಯೂಬ್ ಉಳ್ಳಾಲ್, ಗೌರವ ಕಾರ್ಯದರ್ಶಿಯಾಗಿ ರಾಜೇಶ್ ಪುತ್ರನ್ ಮೊಗವೀರಪಟ್ಣ, ಉಸ್ಮಾನ್ ಕಲ್ಲಾಪು, ಇಸ್ಮಾಯೀಲ್ ಪೊಡಿಮೋನು, ಕಾರ್ಯದರ್ಶಿಗಳಾಗಿ ಮೌರಿಸ್ ಮೊಂತೆರೊ, ಕಿಶೋರ್ ಕುಮಾರ್ ತೊಕ್ಕೊಟ್ಟು, ಕೋಶಾಧಿಕಾರಿಯಾಗಿ ಯು.ಕೆ.ಅಬ್ಬಾಸ್ ಕೋಟೆಪುರ, ಲೆಕ್ಕ ಪರಿಶೋಧಕರಾಗಿ ಸೂರ್ಯಕಲಾ, ಫೈರೋಝ್ ಅಹ್ಮದ್, ಭಗವಾನ್‌ದಾಸ್ ತೊಕ್ಕೊಟ್ಟು, ನವಾಝ್ ಯು.ಕೆ, ಇಮ್ತಿಯಾಝ್ ಕೋಟೆಪುರ, ಸಂಘಟನಾ ಕಾರ್ಯದರ್ಶಿಯಾಗಿ ರವಿ ಗಾಂಧಿನಗರ, ಚಿತ್ರಕಲಾ ಚಂದ್ರಕಾಂತ್, ಭಾರತಿ, ಸಲಹೆಗಾರರಾಗಿ ದಿನೇಶ್ ರೈ, ಅಬ್ದುಲ್ ಹಮೀದ್ ಯು.ಕೆ., ಕ್ರೀಡಾ ಮತ್ತು ಸಾಂಸ್ಕೃತಿ ಕಾರ್ಯದರ್ಶಿಯಾಗಿ ಇಕ್ಬಾಲ್, ಮಹಿಳಾ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ವೀಣಾ ಡಿಸೋಜ, ಪತ್ರಿಕಾ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್‌ರನ್ನು ಆಯ್ಕೆ ಮಾಡಲಾಗಿದೆ.
ಉಳ್ಳಾಲದಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿ ಉಂಟಾಗುವ ವೈಮನಸ್ಸಿನ ಲಾಭ ಪಡೆಯುವ ಶೇ.1ರಷ್ಟು ಜನರಿಂದ ಪರಿಸರದ ಶಾಂತಿ ಕದಡುತ್ತಿವೆ, ಶೈಕ್ಷಣಿಕ, ಸಾಮಾಜಿಕ, ವ್ಯವಹಾರಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಉಳ್ಳಾಲಕ್ಕೆ ಗಲಭೆಗಳೇ ಕಪ್ಪುಚುಕ್ಕೆಯಾಗಿದೆ. ಈ ನಿಟ್ಟಿನಲ್ಲಿ 27 ಪದಾಧಿಕಾರಿಗಳ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ ಪರಿಹರಿಸಲು ಶ್ರಮಿಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.







