ಸುಳ್ಯ ತಾಲೂಕಿಗೆ ವಕ್ಫ್ ನಿಂದ 25 ಲಕ್ಷ ರೂ. ಅನುದಾನ ಬಿಡುಗಡೆ

ಸುಳ್ಯ, ಮಾ.2: ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಿಂದ ಸುಳ್ಯ ತಾಲೂಕಿನ ವಿವಿಧ ಮಸೀದಿ, ಮದರಸ, ಮತ್ತು ವಕ್ಫ್ ಆಸ್ತಿಗಳ ಆವರಣ ಗೋಡೆ ರಚನೆಗೆ ರೂ. 25 ಲಕ್ಷ ಅನುದಾನ ಬಿಡುಗಡೆಗೊಂಡಿರುವುದಾಗಿ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಚಾಲಕ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ದುಗಲಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್‌ಗೆ ರೂ. 8ಲಕ್ಷ, ತಖ್ವೀಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ, ಅಜ್ಜಾವರ - ರೂ.5 ಲಕ್ಷ, ಅನ್ಸಾರಿಯಾ ಅನಾಥಾಲಯ, ಸುಳ್ಯ - ರೂ.4ಲಕ್ಷ, ಜುಮ್ಮಾ ಮಸ್ಜಿದ್ ಗುತ್ತಿಗಾರು-ರೂ. 4 ಲಕ್ಷ, ಸಿರಾಜುಲ್ ಇಸ್ಲಾಂ ಪಳ್ಳಿಮಜಲು, ಬೆಳ್ಳಾರೆ - ರೂ. 2ಲಕ್ಷ, ಜುಮ್ಮಾ ಮಸ್ಜಿದ್, ಕುಂಭಕೋಡು - 2 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ತನ್ವೀರ್ ಸೇಟ್ ಹಾಗೂ ಶಿಫಾರಸು ಮಾಡಿದ ಕರ್ನಾಟಕ ಸರಕಾರ ಅರಣ್ಯ, ಪರಿಸರ ಜೀವಿಶಾಸ್ತ್ರ ಸಚಿವರಾದ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈಯವರಿಗೆ ಅನುದಾನ ಬಿಡುಗಡೆಗೆ ಶ್ರಮಿಸಿದ ಎಸ್. ಸಂಶುದ್ದೀನ್‌ರವರು ಕೃತಜ್ಞತೆ ಸಲ್ಲಿಸಿರುತ್ತಾರೆ.





