ಉಳ್ಳಾಲ: ಮಾರ್ಚ್ 5ರಂದು ರೀಜನಲ್ ಸಂಗಮ -2016- 17 ಕಾರ್ಯಕ್ರಮ

ಉಳ್ಳಾಲ, ಮಾ.2: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಇದರ ಮಂಜೇಶ್ವರ-ಉಪ್ಪಳದ ರೀಜನಲ್ ಸಂಗಮ -2016- 17 ಕಾರ್ಯಕ್ರಮ ಮಾ.5ರಂದು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಶ್ರಮ ವಾಸಿ 10 ಮಂದಿಗೆ ಗಾಲಿ ಕುರ್ಚಿ, ಸ್ಟ್ರೆಚರ್ ವಿತರಣೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ ಎಂದು ಮಂಜೇಶ್ವರ- ಉಪ್ಪಳದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಕ್ಷ್ಣಣ್ ಕುಂಬ್ಲೆ ತಿಳಿಸಿದ್ದಾರೆ.
ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಜೇಶ್ವರ-ಉಪ್ಪಳ ಭಾಗದ ಲಯನ್ಸ್ ಕ್ಲಬ್ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.ಲಯನ್ಸ್ ಕ್ಲಬ್‌ಗೆ ಶತಮಾನದ ಅಂಗವಾಗಿ ವಿವಿದೆಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾ.5 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಡಾ.ಅಮೃತ ಸೋಮೇಶ್ವರ, ಸಮಾಜ ಸೇವಕ ಗೋಪಾಲಕೃಷ್ಣ ( ಸಾಯಿರಾಂ ) ಭಟ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲೆ ಕವಿತಾ ಶಾಸ್ತ್ರಿ ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ಸಿ.ಎ.ಶಿವಪ್ರಸಾದ್ಕೆ ಇವರಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣ್ಣೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಕೆ.ಅಬ್ದುಲ್ ಖಾದರ್ ಮಾಂಗಡ್ ಹಾಗೂ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನ ಮುಖ್ಯಸ್ಥ ವಿ.ಅಮರನಾಥ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ನಿಮಿಷಾ ನಾಯರ್ ಇವರಿಂದ ಕೂಚುಪುಡಿ ನೃತ್ಯ, ತುಳುನಾಡ ರತ್ನ ದಿನೇಶ್ ಅತ್ತಾವರ ಇವರಿಂದ ನೃತ್ಯ ಹಾಗೂ ಪ್ರಕಾಶ ಮಹದೇವನ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸುದ್ಧಿಗೋಷ್ಠಿಯಲ್ಲಿ ರಾಜೇಶ್ ಶೆಟ್ಟಿ, ಮೋಹನ್.ಕೆ, ಪ್ರವೀಣ್ ಪಕ್ಕಳ ಉಪಸ್ಥಿತರಿದ್ದರು.





