ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು

ಸುಂಟಿಕೊಪ್ಪ, ಮಾ.2: ಹರದೂರು ಮುತ್ತಿನ ತೋಟದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿ ಚಾಲಕ ಹಾಗೂ ಕಾರ್ಮಿಕನ ಸಾವನ್ನಪ್ಪಿರುವ ಘಟನೆಯೊಂದು ಘಟಿಸಿದೆ.
ಇಲ್ಲಿಗೆ ಸಮೀಪದ ನಾಕೂರು ಪ್ಲಿಮಾ ಗಂಗಾಧರ ಅವರ ತೋಟದಲ್ಲಿ ಗುರುವಾರ ಸಂಜೆ 4.30 ರ ಸಂದರ್ಭ ಕಾಫಿ ಕುಯಲು ಕೆಲಸವನ್ನು ಮುಗಿಸಿ 15 ಮಂದಿ ಕಾರ್ಮಿಕರನ್ನು ಪನ್ಯ ವಾಸದ ಲೈನ್ ಮನೆಗಳಿಗೆ ಕರೆದೋಯ್ಯತ್ತಿದ್ದ ಸಂದರ್ಭ ಹರದೂರು ಮುತ್ತಿನ ತೋಟದ ಬಳಿಯಲ್ಲಿ ಟಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಬದಿಯ ಚರಂಡಿಗೆ ಪಲ್ಟಿಯಾಘಿದೆ.
ಆಂದಾಜು 20 ಅಡ್ಡಿ ಪ್ರಪಾತಕ್ಕೆ ಪಲ್ಟಿಯಾಗಿದ್ದು, ಚಾಲಕ ಯೂಸುಫ್(36) ನೆರೆಯ ತಮಿಳುನಾಡಿನ ಸೇಲಂನ ಕಾರ್ಮಿಕ ಅಣ್ಣಾಮಲೈ (56) ಇವರುಗಳು ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನಿತರ ಕಾರ್ಮಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೆಗೌಡ, ಸುಂಟಿಕೊಪ್ಪ ಠಾಣಾಧಿಕಾರಿ ಅನೂಫ್ ಮಾದಪ್ಪ ಹಾಗೂ ಸಿಬ್ಬಂದಿ ತೆರಳಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.







