ಪುತ್ತೂರು: ಸ್ಕೂಟರ್-ಕಾರು ಢಿಕ್ಕಿ

ಪುತ್ತೂರು, ಮಾ.2: ಮಾಣಿ ಮೈಸೂರು ರಾಜ್ಯ ಹೆದ್ದಾರಿನ ನೆಹರೂ ನಗರದಲ್ಲಿ ಸ್ಕೂಟರ್ ಮತ್ತು ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ನೆಹರೂನಗರ ನಿವಾಸಿ ಗುರುವಪ್ಪ ಮೂಲ್ಯ ಎಂಬವರ ಪುತ್ರ ಧರ್ಣಪ್ಪ ಮೂಲ್ಯ(68) ಗಾಯಗೊಂಡವರು.
ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರಿಗೆ ಹಿಂಬಾಗದಿಂದ ಸ್ಕೂಟರ್ ಢಿಕ್ಕಿಯಾಗಿದ್ದು, ಈ ಸಂದರ್ಭದಲ್ಲಿ ರಸ್ತೆಗೆಸೆಯಲ್ಪಟ್ಟ ಧರ್ಣಪ್ಪ ಮೂಲ್ಯ ಅವರು ಗಾಯಗೊಂಡಿದ್ದರು. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Next Story





