ಮಂಗಳೂರು: ಡಿವೈಎಫ್‌ಐ ಮುಖಂಡನಿಗೆ ಜೀವ ಬೆದರಿಕೆ

ಮಂಗಳೂರು, ಮಾ. 2: ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರಿಗೆ ಜೀವ ಬೆದರಿಕೆ ನೀಡಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾರು ದಾಖಲಾಗಿದೆ.
ಫೆ. 25ರಂದು ನಗರದ ನೆಹರೂ ಮೈದಾನದಲ್ಲಿ ಸಿಪಿಎಂ ವತಿಯಿಂದ ನಡೆದ ಸೌಹಾರ್ದ ರ‍್ಯಾಲಿಯ ಮಾರನೆ ದಿನ ಫೆ. 26ರಂದು ವ್ಯಾಟ್ಸ್‌ಆ್ಯಪ್ ನಂಬರಿಗೆ ಬೆದರಿಕ ಬಂದಿದೆ. ವಾಟ್ಸ್‌ಆ್ಯಪ್‌ಗೆ ಬಂದ ಮೆಸೇಜ್‌ನಲ್ಲಿ 'ಸಿಪಿಎಂ ಪಕ್ಷದಲ್ಲಿ ಚಟುವಟಿಕೆ ಹೆಚ್ಚಾಗಿದೆ. ನಿನ್ನ ಕೈಕಾಲು ಮುರಿಯುತ್ತೇನೆ' ಎಂದು ಬೆದರಿಕೆ ಹಾಕಲಾಗಿದೆ ಎಂದು ಸಂತೋಷ್ ಬಜಾಲ್ ತಿಳಿಸಿದ್ದಾರೆ.
ಫೆ. 26ರಂದು ವಾಟ್ಸ್‌ಆ್ಯಪ್ ಸಂಖ್ಯೆಗೆ ಬಂದಿರುವ ಮೆಸೇಜ್‌ನ ಫೆ. 27ರಂದು ಗಮನಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಇಂದು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





