ಪರಿಶುದ್ಧವಾದ ಸ್ಪರ್ಧಾಳುಗಳ ವಿರುದ್ಧ ನಾನು ಯಾವತ್ತೂ ಸ್ಪರ್ಧಿಸಿಲ್ಲ: ಮೈಕಲ್ ಫೆಲ್ಪ್ಸ್
.jpg)
ನ್ಯೂಯಾರ್ಕ್, ಮಾ.2: ನನ್ನ ವೃತ್ತಿಜೀವನದಲ್ಲಿ ಸಂಪೂರ್ಣ ಪರಿಶುದ್ಧವಾಗಿರುವ ಸ್ಪರ್ಧಾಳುಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನು ಯಾವತ್ತೂ ಸ್ಪರ್ಧಿಸಿಲ್ಲ. ಅಮೆರಿಕದ ಸಂಸದರು ಜಾಗತಿಕ ಉದ್ದೀಪನಾ ಮದ್ದು ಸೇವನೆ ತಡೆಗೆೆ ಸುಧಾರಣೆಗಳನ್ನು ತರುವ ನಿಟ್ಟಿಯಲ್ಲಿ ಪ್ರಯತ್ನಿಸಬೇಕೆಂದು ಬಯಸುವೆ ಎಂದು ಸಾರ್ವಕಾಲಿಕ ಶ್ರೇಷ್ಠ ಒಲಿಂಪಿಯನ್ ಮೈಕಲ್ ಫೆಲ್ಪ್ಸ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ವೃತ್ತಿಜೀವನದುದ್ದಕ್ಕೂ ಕೆಲವು ಅಥ್ಲೀಟ್‌ಗಳು ವಂಚನೆ ಮಾಡಿರುವುದು, ಕೆಲವೊಂದು ಪ್ರಕರಣದಲ್ಲಿ ಶಂಕಿತರು ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ನಾನು ಹಾಗೂ ಇತರರು ಎಲ್ಲ ಪರೀಕ್ಷೆಯ ಬಳಿಕ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಿದೆ ಎಂದು 23 ಒಲಿಂಪಿಕ್ಸ್ ಪದಕಗಳನ್ನು ಜಯಿಸಿರುವ ಫೆಲ್ಫ್ಸ್ ಹೇಳಿದ್ದಾರೆ.
ರಿಯೋ ಒಲಿಂಪಿಕ್ಸ್‌ನಲ್ಲಿ ಡ್ರಗ್ಸ್ ವಂಚಕರ ವಿರುದ್ಧ ದ್ವನಿ ಎತ್ತಿದ್ದ ಫೆಲ್ಪ್ಸ್, ಡೋಪಿಂಗ್‌ನಲ್ಲಿ ಕಳಂಕಿತರಾದವರು ಮತ್ತೊಮ್ಮೆ ಪ್ರಮುಖ ಟೂರ್ನಿಯಲ್ಲಿ ಸ್ಪರ್ಧಿಸಿದ್ದನ್ನು ನೋಡಿ ನನ್ನ ಹೃದಯ ಛಿದ್ರವಾಗಿತ್ತು ಎಂದು ಫೆಲ್ಪ್ಸ್ ಹೇಳಿದರು.
ಡೋಪಿಂಗ್ ವಿರೋಧಿ ಕ್ರಮಗಳನ್ನು ಕೈಗೊಳ್ಳಲು ಅಮೆರಿಕದ ಸಂಸತ್ ಪ್ರತಿನಿಧಿಗಳಿಗೆ ಫ್ಲೆಲ್ಪ್ಸ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಅಮೆರಿಕ ಸರಕಾರ ವಿಶ್ವ ಉದ್ದೀಪನಾ ತಡೆ ಘಟಕಕ್ಕೆ (ವಾಡಾ) ಆರ್ಥಿಕ ನೆರವನ್ನು ನೀಡುತ್ತಿದೆ. ಸಮಿತಿಯು ಸಂಸ್ಥೆಗೆ ಹೆಚ್ಚು ನಿಧಿ ನೀಡಲು ಶಿಫಾರಸು ಮಾಡಿದೆ.







