ಮೂಡುಬಿದಿರೆ: ಒಂಟಿಕಟ್ಟೆ ನಂದಿನಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ

ಮೂಡುಬಿದಿರೆ, ಮಾ.2: ಒಂಟಿಕಟ್ಟೆ ಮೋನಪ್ಪ ಪೂಜಾರಿಯವರ ಮನೆಯಲ್ಲಿ ಮಂಗಳವಾರ ನಡೆದ ವಂದೇ ಮಾತರಂ ಸೌಹಾರ್ದ ಸಂಘದಿಂದ ಪ್ರಾಯೋಜಿಸಲ್ಪಟ್ಟ ಒಂಟಿಕಟ್ಟೆ ನಂದಿನಿ ಸ್ವಸಹಾಯ ಸಂಘದ 3ನೆ ವರ್ಷದ ವಾರ್ಷಿಕೋತ್ಸವ ನಡೆಯಿತು.
ಕಟೀಲು ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಹಾಗೂ ವಂದೇ ಮಾತರಂ ಸೌಹಾರ್ದ ಸಹಕಾರಿಯ ನಿರ್ದೇಶಕ ಡಾ.ಕೇಶವ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಒಂಟಿಕಟ್ಟೆ ಸ.ಹಿ.ಪ್ರಾ.ಶಾಲಾ ಶಿಕ್ಷಕ ಕರುಣಾಕರ ಸಮಾರಂಭ ಉದ್ಘಾಟಿಸಿದರು.
ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಲಕ್ಷ್ಮೀಯವರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಒಂಟಿಕಟ್ಟೆ ಶ್ರೀ ದುರ್ಗಾ ಸ್ವಸಹಾಯ ಸಂಘದ ವಿಶ್ವನಾಥ ಒಂಟಿಕಟ್ಟೆ ಮುಖ್ಯ ಅತಿಥಿಯಾಗಿದ್ದರು.
ಸ್ವಸಹಾಯ ಸಂಘಗಳ ಮೇಲ್ವೀಚಾರಕ ಅಶೋಕ್ ಪ್ರಾಸ್ತಾವಿಕ ಮಾತನಾಡಿದರು. ಆಶಾ ಸ್ವಾಗತಿಸಿದರು. ಮಮತಾ ವರದಿ ವಾಚಿಸಿದರು. ಗಾಯತ್ರೀ ಕಾರ್ಯಕ್ರಮ ನಿರ್ವಹಿಸಿದರು. ಅಶ್ವಿನಿ ವಂದಿಸಿದರು.
Next Story





