ಟ್ರಾಕ್ಟರ್ ಮಗುಚಿ ಬಿದ್ದು ಇಬ್ಬರು ಸಾವು
ಸುಂಟಿಕೊಪ್ಪ, ಮಾ.2: ಹರದೂರು ಮುತ್ತಿನ ತೋಟದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟಾಕ್ಟರ್ ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದು, ಚಾಲಕ ಹಾಗೂ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಾಲಕ ಯೂಸುಫ್(36), ತಮಿಳುನಾಡಿನ ಸೇಲಂನ ಕಾರ್ಮಿಕ ಅಣ್ಣಾಮಲೈ(56) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಸಮೀಪದ ನಾಕೂರು ಪ್ಲಿಮಾ ಗಂಗಾಧರ ಅವರ ತೋಟದಲ್ಲಿ ಗುರುವಾರ ಸಂಜೆ ವೇಳೆ ಕೆಲಸ ಮುಗಿಸಿದ 15 ಮಂದಿ ಕಾರ್ಮಿಕರು ಪನ್ಯ ವಾಸದ ಲೈನ್ ಮನೆಗಳಿಗೆ ಕಾಫಿ ಕುಡಿಯಲೆಂದು ತೆರಳುತ್ತಿದ್ದರು.
ಈ ವೇಳೆ ಹರದೂರು ಮುತ್ತಿನ ತೋಟದ ಬಳಿಯಲ್ಲಿ ಟ್ರಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಚರಂಡಿಗೆ ಮಗುಚಿ ಬಿದ್ದಿದೆ ಎನ್ನಲಾಗಿದೆ.
ಟ್ರಾಕ್ಟರ್ ಅಂದಾಜು 20 ಅಡಿ ಪ್ರಪಾತಕ್ಕೆ ಮಗುಚಿ ಬಿದ್ದಿದೆ ಎನ್ನಲಾಗಿದ್ದು, ಚಾಲಕ ಯೂಸುಫ್, ಕಾರ್ಮಿಕ ಅಣ್ಣಾಮಲೈ ಎಂಬವರು ತೀವ್ರ ್ತಸ್ರಾವಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನಿತರ ಕಾರ್ಮಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೇಗೌಡ, ಸುಂಟಿಕೊಪ್ಪಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ತೆರಳಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





