ಬಂಟ್ವಾಳ: ನ್ಯಾಯಪರ ಸಮಿತಿ ಅಧ್ಯಕ್ಷರಾಗಿ ಕೃಷ್ಣ ಅಲ್ಲಿಪಾದೆ
ಬಂಟ್ವಾಳ, ಮಾ.2: ಸಾಮಾಜಿಕ ನ್ಯಾಯಪರ ಸಮಿತಿ ಬಂಟ್ವಾಳ ತಾಲೂಕು 5ನೇ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಶ್ರೀ ದೇವಿ ರಕ್ತೇಶ್ವರಿ ಸಭಾಂಗಣದಲ್ಲಿ ಸಂಘದ ಅಧಕ್ಷ ಕೃಷ್ಣ ಅಲ್ಲಿಪಾದೆ ಅಧ್ಯಕ್ಷತೆಯಲ್ಲಿ ಜರಗಿತು.
2017-18 ನೇ ಸಾಲಿನ ಅಧ್ಯಕ್ಷರಾಗಿ ಕೃಷ್ಣ ಅಲ್ಲಿಪಾದೆ, ಉಪಾಧ್ಯಕ್ಷರಾಗಿ ರಾಜಾ ಚಂಡ್ತಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಶೆಟ್ಟಿ ಸರಪಾಡಿ, ಕಾರ್ಯದರ್ಶಿಯಾಗಿ ಹಾರೂನ್ ರಶೀದ್ ಬಂಟ್ವಾಳ, ಕೋಶಾಧಿಕಾರಿಯಾಗಿ ಎನ್.ಪದ್ಮನಾಭ ಮಯ್ಯ ಏಲಬೆ, ಗೌರವ ಸಲಹೆಗಾರರಾಗಿ ನ್ಯಾಯವಾದಿ ಸುರೇಶ್ ಕುಮಾರ್ ನಾವೂರು, ಸಿವಿಲ್ ಇಂಜಿನಿಯರ್ ವಸಂತ ಕೆ. , ಹಾಗೂ ಸಮಿತಿ ಸದಸ್ಯರಾಗಿ ಬಿ.ಎಂ. ಪ್ರಭಾಕರ ದೈವಗುಡ್ಡೆ, ಲೋಕೇಶ ಎಕ್ಕುಡೇಲು, ಪುರುಪೋತ್ತಮ ಮಜಲು, ಅಬ್ದುಲ್ ರಝಾಕ್ ಗುಂಪಕಲ್ಲು, ಪುರುಷೋತ್ತಮ ನಾಟಿ, ದಿವಾಕರ ಕುಲಾಲ್ ಕೊಳಕೆ, ಶ್ರೀನಿವಾಸ ಶೆಟ್ಟಿ ಪಚ್ಚಿನಡ್ಕ, ಗೋಪಾಲ ಕೃಷ್ಣ ಬೊಂಡಾಲ, ಕೃಷ್ಣಪ್ಪ ನಾಕ್ ನಾಟಿ, ಆಯೂಬ್ ಜಿ.ಕೆ. ಗೂಡಿನ ಬಳಿ, ಹರೀಶ ಪೆರಾಜೆ, ಝಮೀರುಲ್ಲಾ ನಂದಾವರ, ವಾಮನ ಅಬ್ಬಯಮಜಲು, ಬೇಬಿ ಪೂಜಾರಿ ಮಿತ್ತಕೋಡಿ, ನಿತೇಶ್ ನಾಟಿ ಇವರೆಲ್ಲರನ್ನೂ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.





