ಪುತ್ತೂರು: ಹಲ್ಲೆ ಪ್ರಕರಣ, ಆರೋಪಿ ಖುಲಾಸೆ

ಪುತ್ತೂರು, ಮಾ.2: ಪುತ್ತೂರಿನಲ್ಲಿ ನಾಲ್ಕು ವರ್ಷದ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಪುತ್ತೂರಿನ ಬೊಳ್ವಾರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರು 2013ರ ಮೇ 3ರಂದು ಪುತ್ತೂರು ಬಸ್ ನಿಲ್ದಾಣದ ಬಳಿ ನಿಂತುಕೊಂಡಿದ್ದ ವೇಳೆ ಬೊಳ್ವಾರಿನ ಇಸ್ಮಾಯಿಲ್ ಎಂಬವರು ಕಬ್ಬಿಣದ ರಾಡ್‌ನಿಂದ ಹೊಡೆದು ಗಂಭೀರ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸಿ ಖುಲಾಸೆಗೊಳಿಸಿದೆ.ಆರೋಪಿ ಪರವಾಗಿ ವಕೀಲರಾದ ಉದಯಶಂಕರ ಶೆಟ್ಟಿ, ಮಾಧವ ಪೂಜಾರಿ, ರಾಕೇಶ್ ಬಿ.,ಮೋಹಿನಿ ಅವರು ವಾದಿಸಿದ್ದರು.
Next Story





