ಕ್ರಿಕೆಟಿಗ ರವಿಶಾಸ್ತ್ರಿ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಮುಲ್ಕಿ, ಮಾ.2: ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವಿಕರಿಸಿದರು.
ಬೆಳಗ್ಗೆ ಸುಮಾರು 7.45 ಕ್ಕೆ ಉಡುಪಿ ಕಡೆಯಿಂದ ಪಾವಂಜೆ ದೇವಸ್ಥಾನಕ್ಕೆ ಆಗಮಿಸಿದ ಕ್ರಿಕೆಟಿಗ ರವಿಶಾಸ್ತ್ರಿ ಪಾವಂಜೆ ದೇವಸ್ಥಾನದ ಪುಜಾ ಕೈಂಕರ್ಯದಲ್ಲಿ ಭಾಗವಹಿಸಿ ಬಳಿಕ ಕುಕ್ಕೆ ಸುಬ್ರಣ್ಯಕ್ಕೆ ತೆರಳಿದರು.
ಭಾರತೀಯ ತಂಡವು ಪ್ರವಾಸಿ ಆಸ್ಟ್ರೇಲಿಯಾ ವಿರುದ್ದ ಮೊದಲ ಟೆಸ್ಟಿನಲ್ಲಿ ಹೀನಾಯ ಸೋಲಿನ ಪ್ರದರ್ಶನ ನೀಡಿದ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ರವಿಶಾಸ್ತ್ರಿ ಪಂದ್ಯದಲ್ಲಿ ಸೋಲು ಗೆಲುವು ಸಹಜ ತಂಡವು ಸಮತೋಲವಾಗಿದ್ದು ಮುಂದಿನ ಪಂದ್ಯಗಳಲ್ಲಿ ಭಾರತೀಯ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಆಟಗಾರರಿರುವ ಭಾರತೀಯ ತಂಡವು ಮುಂದಿನ ದಿನಗಳಲ್ಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ವಿಶ್ವದ ಶ್ರೇಷ್ಠ ತಂಡವಾಗಿ ಮೂಡಿಬರಲಿದೆ ಎಂದು ಹೇಳಿದರು.
ಈ ನಡುವೆ ರವಿ ಶಾಸ್ತ್ರಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ಅಭಿಮಾನಿಗಳು ಸಂತಸಪಟ್ಟರು.
ಹೇಳಿದ ಸಮಯಕ್ಕೆ ಸಿಂಪಲ್ಲಾಗಿಯೇ ದೇವಳಕ್ಕೆ ಆಗಮಿಸಿದ ಪ್ರಖ್ಯಾತ ಕ್ರಿಕೆಟಿಗರಿಗೆ ದೇವಳದ ಆಡಳಿತ ಮಂಡಳಿ ಅತ್ಮೀಯ ಸ್ವಾಗತ ನೀಡಿತು.ರವಿಶಾಸ್ತ್ರಿ ಜೊತೆ ಉದ್ಯಮಿ ವಾಧಿರಾಜ ಪೆಜತ್ತಾಯ,ಡಾ. ಸಂತೋಷ್ ಶಾಸ್ತ್ರಿ.ಲಯನ್ ಕವಿತಾ ಶಾಸ್ತ್ರಿ,ಶೀರೂರು ಮಠದ ಲಾತವ್ಯ ಆಚಾರ್ಯ,ಅಶ್ವಿನ್ ಮತ್ತಿತರರು ಇದ್ದರು.







