ಮುಲ್ಕಿ: ಕಾರಿಗೆ ಕಾರು ಡಿಕ್ಕಿ ಟಯರ್ ಸ್ಫೋಟ ಪ್ರಯಾಣಿಕರು ಪಾರು

ಮುಲ್ಕಿ, ಮಾ.2: ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಜಂಕ್ಷನ್ ಬಳಿ ಉಡುಪಿ ಕಡೆಯಿಂದ ಬರುತ್ತಿದ್ದ ಕಾರಿಗೆ ಕಾರು ಡಿಕ್ಕಿಯಾಗಿ ಒಂದು ಕಾರಿಯ ಟಯರ್ ಸ್ಪೋಟಗೊಂಡು ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಶಿವಮೊಗ್ಗ ಕಡೆಯಿಂದ ಮಂಗಳೂರು ಎಜೆ ಆಸ್ಪತ್ರೆ ಕಡೆಗೆ ಹೋಗುತ್ತಿದ್ದ ಝೆನ್ ಕಾರಿಗೆ ಬಪ್ಪನಡು ದೇವಳದ ಬಳಿಯ ಹೆದ್ದಾರಿಯಲ್ಲಿ ಬಿಎಂಡಬ್ಲೂ ಕಾರಿನ ಚಾಲಕ ಯಾವುದೇ ಮನ್ಸೂಚನೆ ಇಲ್ಲದೆ ಹೆದ್ದಾರಿಯನ್ನು ಕ್ರಾಸ್ ಮಾಡಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಝೆನ್ ಕಾರಿನ ಟಯರ್ ಸ್ಪೋಟಗೊಂಡು ಭೀಕರ ಶಬ್ದ ಉಂಟಾಗಿ ಕಾರಿಗೆ ಭಾರೀ ಹಾನಿ ಸಂಭವಿಸಿದೆ. ಝೆನ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಅಪಘಾತದಿಂದ ಕೆಲ ಕಾಲ ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿತು.
Next Story





