ಕೊಹ್ಲಿ ದಾಖಲೆ ಸಚಿನ್‌ಗಿಂತ ಶ್ರೇಷ್ಠ: ಗಂಗುಲಿ

ಹೊಸದಿಲ್ಲಿ, ಮಾ.2: ಪುಣೆಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 333 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಮಾಜಿ ನಾಯಕ ಸೌರವ್ ಗಂಗುಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪುಣೆಯ ಪಿಚ್‌ನಲ್ಲಿ 0 ಹಾಗೂ 13 ರನ್ ಗಳಿಸಿರುವ ಕೊಹ್ಲಿಯನ್ನು ಶ್ಲಾಘಿಸಿದ ಗಂಗುಲಿ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್‌ರೊಂದಿಗೆ ಕೊಹ್ಲಿಯನ್ನು ಹೋಲಿಕೆ ಮಾಡಿದರು.
ಕೊಹ್ಲಿ ಒಂದು ದಿನ ತಪ್ಪು ಮಾಡಿದ್ದಾರೆ. ಅವರು ಪುಣೆ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಆಡಲು ಹೋಗಿ ಔಟಾಗಿದ್ದರು. ಕೊಹ್ಲಿ ಆಸ್ಟೇಲಿಯ ನೆಲದಲ್ಲಿ ಭಾರೀ ಯಶಸ್ಸು ಕಂಡಿದ್ದರು. ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯ ವಿರುದ್ಧ ಸತತ ನಾಲ್ಕು ಟೆಸ್ಟ್ ಶತಕವನ್ನು ಸಿಡಿಸಿದ್ದನ್ನು ನೋಡುವುದು ಅಸಂಭವ. ಸಚಿನ್ ತೆಂಡುಲ್ಕರ್ ಕೂಡ ಈ ಸಾಧನೆ ಮಾಡಿದ್ದು ನಾನು ನೋಡಿಲ್ಲ ಎಂದು ಗಂಗುಲಿ ಅಭಿಪ್ರಾಯಪಟ್ಟರು.
Next Story





