ಇಂದು ಬಪ್ಪಳಿಗೆ ಮಸೀದಿ ಮೇಲಂತಸ್ತು ಉದ್ಘಾಟನೆ
ಪುತ್ತೂರು, ಮಾ.2: ಬಪ್ಪಳಿಗೆ ಮಸ್ಜಿದುನ್ನೂರು ಮಸೀದಿಯ ಮೇಲಂತಸ್ತು ಕಟ್ಟಡದ ಉದ್ಘಾಟನೆ, ಸನ್ಮಾನ, ಬುರ್ದಾ ಹಾಗೂ ದಫ್ ಸ್ಪರ್ಧಾ ಕಾರ್ಯಕ್ರಮ ಮಾ.3ರಂದು ನಡೆಯಲಿದೆ ಎಂದು ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ವಿ.ಕೆ. ಶರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪೂರ್ವಾಹ್ನ 11 ಗಂಟೆಗೆ ಮಸೀದಿ ವಕ್ಫ್ ಕಾರ್ಯಕ್ರಮ ನಡೆಯಲಿದ್ದು, ಈ ಸಂದಭರ್ದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಪುತ್ತೂರು ಮುದರ್ರಿಸ್ ಅಸ್ಸೈಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನದ ಮೂಲಕ ಉದ್ಘಾಟಿಸಲಿದ್ದಾರೆ. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಯು.ಅಬ್ದುಲ್ಲ್ಲಾ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಡಾ.ಇಕ್ಬಾಲ್ ಮಂಗಳೂರು ಮತ್ತು ಅಬೂಬಕರ್ ಮಂಗಳೂರು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಮತ್ತು ದಾನಿಗಳ ಸಹಾಯದಿಂದ ನಿರ್ಮಿಸಲಾಗುತ್ತಿರುವ ಮಯ್ಯತ್‌ಪರಿಪಾಲನಾ ಕೊಠಡಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು.
ರಾತ್ರಿ 7 ಗಂಟೆಯ ಬಳಿಕ ಪ್ರವಾದಿ ಕುರಿತ ಬುರ್ದಾ ಗಾಯನ ಸ್ಪರ್ಧೆ ಮತ್ತು ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪುತ್ತೂರು ಮುದರ್ರಿಸ್ ಅಸ್ಸೈಯದ್ ಅಹ್ಮದ್ ಪೂಕೋಯ ತಂಙಳ್ ದುವಾದ ಮೂಲಕ ಉದ್ಘಾಟಿಸಲಿದ್ದಾರೆ. ಜಿಲ್ಲಾ ವಕ್ಫ್ ಬೋರ್ಡ್ ಸಲಹೆಗಾರ ಯುನಿಟಿ ಹಸನ್ ಹಾಜಿ ಕೂರ್ನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಪ್ಪಳಿಗೆ ಮಸೀದಿಯ ಮಾಜಿ ಖತೀಬ್ ಅಲ್‌ಹಾಜ್ ಸಿರಾಜುದ್ದೀನ್ ಫೈಝಿ ಮತ್ತು ನಝೀರ್ ಮುಸ್ಲಿಯಾರ್ ಪುತ್ತೂರು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಪ್ಪಳಿಗೆ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್, ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯ ಅಧ್ಯಕ್ಷ ಶಾಫಿ ಬಪ್ಪಳಿಗೆ, ಸುಲ್ತಾನ್ ಮೆಮೋರಿಯಲ್ ದಫ್ ಸಂಘದ ಅಧ್ಯಕ್ಷ ಬಿ.ಎಚ್.ರಝಾಕ್, ಪ್ರಧಾನ ಕಾರ್ಯದರ್ಶಿ ಶಾಫಿ ಗಡಿಪ್ಪಿಲ, ಝುಬೈರ್ ಯು.ಕೆ, ಇಮ್ತಿಯಾಝ್ ಬಪ್ಪಳಿಗೆ ಮತ್ತು ಮೋನು ಬಪ್ಪಳಿಗೆ ಉಪಸ್ಥಿತರಿದ್ದರು.







