ಪಿಣರಾಯಿ ತಲೆಗೆ ಕೋಟಿ ಬಹುಮಾನ ಘೋಷಣೆ: ಸ್ಪಷ್ಟೀಕರಣ ನೀಡಿದ ಆರೆಸ್ಸೆಸ್

ಹೊಸದಿಲ್ಲಿ, ಮಾ.3: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಕುಂದನ್ ಚಂದ್ರಾವತ್ ಘೋಷಿಸಿದ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘ ಗುರುವಾರ ಸ್ಪಷ್ಟನೆ ನೀಡಿ, "ರಾಷ್ಟ್ರೀಯವಾದಿ ಸಂಘಟನೆ ಎಂದೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ" ಎಂದು ಹೇಳಿದೆ. ಜತೆಗೆ ಕುಂದನ್ ಹೇಳಿಕೆಯನ್ನು ಪ್ರಬಲವಾಗಿ ಖಂಡಿಸುವುದಾಗಿಯೂ ಸ್ಪಷ್ಟಪಡಿಸಿದೆ.
"ಉಜ್ಜಯಿನಿ ಸಹ ಪ್ರಚಾರ ಪ್ರಮುಖ ಕುಂದನ್ ಚಂದ್ರಾವತ್ ಕೇರಳ ಸಿಎಂ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಇದನ್ನು ಆರೆಸ್ಸೆಸ್ ಒಪ್ಪುವುದಿಲ್ಲ ಹಾಗೂ ಇಂತಹ ಪ್ರತಿಪಾದನೆಯನ್ನು ಬೆಂಬಲಿಸುವುದಿಲ್ಲ" ಎಂದು ಕ್ಷೇತ್ರ ಪ್ರಚಾರ ಪ್ರಮುಖ ಡಾ.ಪ್ರವೀಣ್ ಕಾಬ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹಿಂಸೆಯನ್ನು ಪ್ರಚೋದಿಸುವ ಕೇಳಿಕೆಯನ್ನು ಆರೆಸ್ಸೆಸ್ ಖಂಡಿಸುತ್ತದೆ ಎಂದೂ ಅವರು ವಿವರಿಸಿದ್ದಾರೆ.
ಪಿಣರಾಯಿ ವಿಜಯನ್ ತಲೆ ತಂದೊಪ್ಪಿಸುವವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಕುಂದನ್ ಹೇಳಿಕೆ ನೀಡಿದ್ದರು.
Next Story