ಸೈಯದ್ ಶಹಾಬುದ್ದೀನ್ ಇನ್ನಿಲ್ಲ

ಹೊಸದಿಲ್ಲಿ,ಮಾ.4: ಮಾಜಿ ಸಂಸದ, ನಿವೃತ್ತ ಐಎಫ್‌ಎಸ್ ಅಧಿಕಾರಿ, ಅಲ್ ಇಂಡಿಯ ಮುಸ್ಲಿಮ್ ಮಜ್ಲಿಸೆ ಮುಶಾವರದ ಮಾಜಿ ಅಧ್ಯಕ್ಷ ಸೈಯದ್ ಶಹಾಬುದ್ದೀನ್(82) ದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಅವರು 1935ರಲ್ಲಿ ರಾಂಚಿಯಲ್ಲಿ ಸೈಯದ್ ನಿಜಾಮುದ್ದೀನ್, ಸಕೀನಾ ಬಾನು ದಂಪತಿಯ ಪುತ್ರನಾಗಿ ಜನಿಸಿದ್ದರು.
ಕುಟುಂಬ ಮೂಲಗಳು ತಿಳಿಸಿದ ಪ್ರಕಾರ ಸೈಯದ್ ಶಹಾಬುದ್ದೀನ್ ಇಂದು ಬೆಳಗ್ಗೆ 6:22 ಗಂಟೆ ವೇಳೆಗೆ ನಿಧನರಾದರು. ಅವರ ಜನಾಝ ನಮಾಝ್ ಮಧ್ಯಾಹ್ನ 1:30ಕ್ಕೆ ನಿಜಾಮುದ್ದೀನ್‌ನಲ್ಲಿ ನಡೆಯಲಿದೆ.
ಅವರು ಝಾರ್ಖಂಡ್‌ನ ರಾಂಚಿಯವರಾಗಿದ್ದು, ಮೂರು ಬಾರಿ 1979ರಿಂದ 1996ರವರೆಗೆ ಸಂಸದರಾಗಿ ಆಯ್ಕೆ ಆಗಿದ್ದರು. ಸುಪ್ರೀಂ ಕೋರ್ಟಿನ ವಕೀಲರಾಗಿಯೂ ಕೆಲಸ ಮಾಡಿದ್ದಾರೆ. ಶಾಬಾನು ಪ್ರಕರಣದಲ್ಲಿ ಮತ್ತು ಬಾಬರಿ ಮಸೀದಿ ಧ್ವಂಸದ ವಿರುದ್ಧ ಹೋರಾಟ ಸಮಿತಿಯ ನಾಯಕರಾಗಿ ಪ್ರಸಿದ್ಧರಾಗಿದ್ದರು. ಸೈಯದ್ ಶಹಾಬುದ್ದೀನ್ ಓರ್ವ ರಾಜಕೀಯ ಮುತ್ಸದ್ದಿ, ಓರ್ವ ರಾಯಭಾರಿ ಮತ್ತು ರಾಜತಾಂತ್ರಿಕರ ರೂಪದಲ್ಲಿಯೂ ಕೆಲಸ ಮಾಡಿದ್ದಾರೆ. ಅವರು 1989ರಲ್ಲಿ ಇನ್ಸಾಫ್ ಪಾರ್ಟಿಯನ್ನು ಸ್ಥಾಪಿಸಿದ್ದರು.





