ಥಗ್ಸ್ ಆಫ್ ಹಿಂದೂಸ್ಥಾನ್ ನ್ನಲ್ಲಿ ಆಮಿರ್-ಅಮಿತಾಭ್ ಧಮಾಕ

ಬಾಲಿವುಡ್ ಚಿತ್ರರಸಿಕರು ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರಕ್ಕಾಗಿ ತುದಿಗಾಲಿನಿಂದ ಕಾದುನಿಂತಿದ್ದಾರೆ. ಮಿಸ್ಟರ್ ಪರ್‌ಫೆಕ್ಷನಿಸ್ಟ್ ‘ಆಮಿರ್‌ಖಾನ್’ ಹಾಗೂ ಬಿಗ್ ಬಿ ಅಮಿತಾಭ್ ಇದೇ ಮೊದಲ ಬಾರಿಗೆ ಒಂದೇ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವು ಶೂಟಿಂಗ್‌ಗೆ ಮುನ್ನವೇ ಬಾಲಿವುಡ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ವಿನೂತನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಆಮಿರ್ ಅವರ ಹೊಸಲುಕ್ ಅಂತೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ. ಆದಾಗ್ಯೂ, ಅಮಿರ್ ಈ ಸರ್ದಾರ್ ಗೆಟಪ್ ಧರಿಸಿರುವುದು ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರಕ್ಕಾಗಿ ಅಲ್ಲವೆಂಬ ಗುಟ್ಟನ್ನು, ಸ್ವತಃ ನಟನ ವಕ್ತಾರರೇ ಬಯಲು ಮಾಡಿದ್ದಾರೆ. ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಭಾರೀ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ಥಗ್ಸ್ ಆಫ್ ಹಿಂದೂಸ್ಥಾನ್’ ಮೇನಲ್ಲಿ ಚಿತ್ರೀಕರಣ ಆರಂಭಿಸಲಿದೆ.
ದಂಗಲ್‌ನ ಭರ್ಜರಿ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಆಮಿರ್, ಥಗ್ಸ್ ಆಫ್ ಹಿಂದೂಸ್ತಾನ್‌ಗಾಗಿಯೂ ಸಾಕಷ್ಟು ಶ್ರಮವಹಿಸಿ ಪೂರ್ವತಯಾರಿ ನಡೆಸುತ್ತಿದ್ದಾರೆ. ದಂಗಲ್‌ನಲ್ಲಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಪಾತ್ರದಲ್ಲಿ ದಢೂತಿದೇಹದಲ್ಲಿ ಕಂಗೊಳಿಸಿದ್ದ ಅವರು, ತನ್ನ ಮುಂದಿನ ಚಿತ್ರದಲ್ಲಿ ಕೃಶಕಾಯನಾಗಿ ಕಾಣಿಸಿಕೊಳ್ಳಲಿದ್ದಾರೆ.
‘ಕನ್‌ಫೆಶನ್ಸ್ ಆಫ್ ಎ ಥಗ್’ ಕಾದಂಬರಿಯನ್ನು ಆಧರಿಸಿದ ಥಗ್ಸ್ ಆಫ್ ಹಿಂದೂಸ್ಥಾನ್ ಮುಂದಿನ ದೀಪಾವಳಿಗೆ ಬಿಡುಗಡೆಗೊಳ್ಳಲಿದೆ. ಜಾಕಿಶ್ರಾಫ್‌ಗೂ ಚಿತ್ರದಲ್ಲಿ ಮುಖ್ಯವಾದ ಪಾತ್ರವೊಂದಿದೆ.
ಇದಕ್ಕೂ ಮುನ್ನ ಆಮಿರ್ ಅಭಿನಯದ ಸೀಕ್ರೆಟ್ ಸೂಪರ್‌ಸ್ಟಾರ್ ಚಿತ್ರ ಬಿಡುಗಡೆಗೊಳ್ಳಲಿದೆ. ಅದ್ವೈತ್ ಚಂದನ್ ನಿರ್ದೇಶನದ ಸೀಕ್ರೆಟ್‌ಸೂಪರ್‌ಸ್ಟಾರ್‌ಗೆ ಆಮಿರ್ ಹಾಗೂ ಅವರ ಪತ್ನಿ ಕಿರಣ್ ಹಣಹಾಕಿದ್ದಾರೆ. ಝೈರಾ ವಾಸಿಂ, ಮೆಹೆರ್ ವಿಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಸೀಕ್ರೆಟ್ ಸೂಪರ್‌ಸ್ಟಾರ್ ಆಗಸ್ಟ್ 4ರಂದು ಬಿಡುಗಡೆಯಾಗಲಿದೆ.







