ಫೆಲೆಸ್ತೀನ್‌ಗೆ ಬೆಂಬಲ ಸೂಚಿಸಿ ಕೆನಡದ ಜನರಿಂದ ಇಸ್ರೇಲ್ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ

ಕೆನಡ,ಮಾ. 4: ಫೆಲೆಸ್ತೀನ್‌ಗೆ ಬೆಂಬಲ ಸೂಚಿಸಿ ಕೆನಡದಲ್ಲಿ ಇಸ್ರೇಲಿನ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆನ್ನುವ ಬೇಡಿಕೆ ತೀವ್ರಗೊಂಡಿದೆ. ಇದು ಕೆನಡ ಫಾರ್ ಮಿಡ್ಲ್ ಈಸ್ಟ್ ಜಸ್ಟಿಸ್ ಆಂಡ್ ಪೀಸ್ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಸಮೀಕ್ಷೆ ಪ್ರಕಾರ, ಫೆಲೆಸ್ತೀನಿನಲ್ಲಿ ಇಸ್ರೇಲ್ ಅಕ್ರಮ ವಾಸಕೇಂದ್ರ ನಿರ್ಮಿಸುತ್ತಿರುವುದನ್ನು ಕೆನಡ ಜನರು ಖಂಡಿಸಿದ್ದಾರೆ. ಇಸ್ರೇಲ್ ಅಂತಾರಾಷ್ಟ್ರೀಯ ಕಾನೂನನ್ನು ನಾಶಮಾಡುತ್ತಿದೆ ಆದ್ದರಿಂದ ಅದನ್ನು ಬಹಿಷ್ಕರಿಸಬೇಕು ಎನ್ನುವ ಫೆಲೆಸ್ತೀನಿಯರ ಬೇಡಿಕೆ ಸರಿಯಾಗಿದೆ ಎಂದು ಜನರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
2009ರಲ್ಲಿ ಅಮೆರಿಕದ ಒತ್ತಡದಿಂದ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಫೆಲೆಸ್ತೀನ್ ಪ್ರದೇಶಗಳಿಂದ ತಮ್ಮ ಸೈನಿಕರನ್ನು ವಾಪಸು ಕರೆಸುವುದಾಗಿ ಹೇಳಿದ್ದರು ಎಂದು ವರದಿ ತಿಳಿಸಿದೆ.
Next Story





