ಎಲ್ಲಾ ಕಡೆ ಸೋತವರು ಬಿಜೆಪಿ ಸೇರುತ್ತಿದ್ದಾರೆ: ಮಧು ಬಂಗಾರಪ್ಪ ಟೀಕೆ

ಮಂಗಳೂರು, ಮಾ.4: ಬಿಜೆಪಿ ಸೇರುತ್ತಿರುವವರಲ್ಲಿ ಜನಪ್ರತಿನಿಧಿಗಳು ಇಲ್ಲ. ಎಲ್ಲ ಕಡೆ ಸೋತವರು ಬಿಜೆಪಿಗೆ ಹೋಗುತ್ತಿದ್ದಾರೆ. ಒಂದರ್ಥದಲ್ಲಿ ತುಕ್ಕು ಹಿಡಿದವರು ಬಿಜೆಪಿಗೆ ಹೋಗಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆ ಕುರಿತಂತೆ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ತನ್ನ ಅಣ್ಣ ಕುಮಾರ ಬಂಗಾರಪ್ಪಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದವರು. ಅದೇರೀತಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕೂಡ ಚುನಾವಣೆಯಲ್ಲಿ ಸೋತವರು ಎಂದು ತಿಳಿಸಿದರು.
ಅಣ್ಣ ಕಾಂಗ್ರೆಸ್ ಕೈ ಕಡಿದಿದೆ ಎಂದಿದ್ದಾರೆ. ಇನ್ನೂ ಬಿಜೆಪಿ ಆತನ ಕಾಲು ಕಡಿಯಲಿದೆ ಎಂದು ವ್ಯಂಗ್ಯವಾಡಿದ ಮಧು, ಯಡಿಯೂರಪ್ಪಸುಳ್ಳುಗಾರ ಎಂದರು.
ತನಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಆಹ್ವಾನ ಬಂದಿದೆ. ಆದರೆ ನಾನು ಕಾಂಗ್ರೆಸ್ ಗೆ ಹೋಗುವ ಯೋಚನೆ ಇಲ್ಲ. ಅಂತಹ ದುರಾಸೆ ಇಲ್ಲ ಎಂದರು.
ಏಳು ಜೆಡಿಎಸ್ ಶಾಸಕರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಇದೀಗ ನಿರಾಳವಾಗಿದೆ. ಆ ಏಳು ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸುವುದಿಲ್ಲ. ಅವರ ಕ್ಷೇತ್ರದಲ್ಲಿ ಪಕ್ಷ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದರು.





