ರಿಲಯನ್ಸ್ ಜಿಯೋಗೆ ಏರ್‌ಟೆಲ್ ಸಡ್ಡು
345 ರೂ.ಗೆ 28 ಜಿಬಿ ಡಾಟಾ ಕೊಡುಗೆ
ಹೊಸದಿಲ್ಲಿ,ಮಾ.4: ರಿಲಯನ್ಸ್ ಜಿಯೋ ತನ್ನ ಪ್ರೈಮ್ ಮೆಂಬರ್‌ಶಿಪ್ ಯೋಜನೆ ಯನ್ನು ಪ್ರಕಟಿಸಿರುವ ಬೆನ್ನಿಗೇ ಏರಟೆಲ್ ತನ್ನ ಚಂದಾದಾರರಿಗೆ 28 ದಿನಗಳ ಅವಧಿಗೆ 28 ಜಿಬಿ ಡಾಟಾ ಕೊಡುಗೆಯನ್ನು ಪ್ರಕಟಿಸಿದೆ. ಹೊಸ ರೀಚಾರ್ಜ್‌ಗೆ 345 ರೂ.ದರ ನಿಗದಿಗೊಳಿಸಿದ್ದು, ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಉಚಿತವಾಗಿವೆ.
ಜಿಯೋ 303 ರೂ.ಗೆ 28 ದಿನಗಳ ಅವಧಿಗೆ 28 ಜಿಬಿ ಡಾಟಾ ಪ್ರಕಟಿಸಿದೆ. ಗ್ರಾಹಕರು ದಿನವೊಂದಕ್ಕೆ ಸಮಯ ನಿರ್ಬಂಧವಿಲ್ಲದೆ ಒಂದು ಜಿಬಿ ಡಾಟಾ ಬಳಸಬಹುದು. ಆದರೆ ಏರ್‌ಟೆಲ್‌ನ 345 ರೂ.ಪ್ಯಾಕೇಜ್ 28 ದಿನಗಳ ಅವಧಿಗೆ ಪ್ರತಿ ದಿನ ಒಂದು ಜಿಬಿ ಡಾಟಾ ನೀಡುತ್ತದೆಯಾದರೂ, ಹಗಲಿಗೆ 500ಎಂಬಿ ಬಳಕೆಗೆ ಸೀಮಿತಗೊಳಿಸಿದೆ. ಉಳಿದ 500 ಎಂಬಿಯನ್ನು ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯ ನಡುವೆ ಬಳಸಬಹುದು.
ಯಾವುದೇ ಸಮಯ ನಿರ್ಬಂಧವಿಲ್ಲದ ಏರ್‌ಟೆಲ್ ಡಾಟಾ ಬೇಕಾದವರು 549 ರೂ.ಗಳ ರೀಚಾರ್ಜ್ ಪ್ಯಾಕ್ ಆಯ್ದುಕೊಳ್ಳಬಹುದು. ಇದು 28 ದಿನಗಳ ಅವಧಿಗೆ ಪ್ರತಿದಿನ ಒಂದು ಜಿಬಿ ಡಾಟಾವನ್ನು ಯಾವುದೇ ಸಮಯ ನಿರ್ಬಂಧವಿಲ್ಲದೆ ಒದಗಿಸುತ್ತದೆ.
ಮಾ.13ಕ್ಕೆ ಮುನ್ನ 345 ಅಥವಾ 549 ರೂ.ಪ್ಯಾಕ್ ಖರೀದಿಸುವ ಏರ್‌ಟೆಲ್ ಗ್ರಾಹಕರಿಗೆ ಈ ಕೊಡುಗೆ 12 ತಿಂಗಳವರೆಗೆ ಲಭ್ಯವಿರುತ್ತದೆ.
549 ರೂ.ಗಳ ಏರಟೆಲ್ ರೀಚಾರ್ಜ್ ಪ್ಯಾಕ್ ಖರೀದಿಸಿದವರು ಒಂದು ವಾರಕ್ಕೆ 1,200 ನಿಮಿಷಗಳ ಉಚಿತ ಕರೆ (ಸ್ಥಳೀಯ ಮತ್ತು ಎಸ್‌ಟಿಡಿ)ಗಳನ್ನು ಮಾಡಬಹು ದಾಗಿದೆ. 1,200 ನಿಮಿಷಗಳನ್ನು ಮೀರಿದರೆ ಪ್ರತಿ ನಿಮಿಷಕ್ಕೆ 30 ಪೈಸೆ ವಿಧಿಸಲಾಗುತ್ತದೆ. ಅಲ್ಲದೆ ಉಚಿತ ಕರೆಗಳ ದಿನದ ಕೋಟಾವನ್ನೂ 300 ನಿಮಿಷಗಳಿಗೆ ನಿಗದಿಗೊಳಿ ಸಿದ್ದು,ಮೀರಿದರೆ ಪ್ರತಿ ನಿಮಿಷಕ್ಕೆ 30 ಪೈಸೆ ವಿಧಿಸಲಾಗುತ್ತದೆ.
ಐಡಿಯಾ ಸೆಲ್ಯುರ್ ಕೂಡ ಹೊಸ ಪ್ಯಾಕ್ ಪ್ರಕಟಿಸಿದೆ. 348 ರೂ.ಗೆ ಯಾವುದೇ ಸಮಯ ನಿರ್ಬಂಧವಿಲ್ಲದೆ ಪ್ರತಿ ದಿನಕ್ಕೆ 500 ಎಂಬಿಯಂತೆ 28 ದಿನಗಳಿಗೆ 14 ಜಿಬಿ ಡಾಟಾ ಗ್ರಾಹಕರಿಗೆ ದೊರೆಯುತ್ತದೆ ಮತ್ತು ಅನಿಯಮಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳು ಉಚಿತವಾಗಿರುತ್ತವೆ. ಆದರೆ ಈ ಕೊಡುಗೆ ಸದ್ಯಕ್ಕೆ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಾಗುತ್ತಿದೆ.