ಮಾ.5 : ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ ಇದರ ವತಿಯಿಂದ ಧಾರ್ಮಿಕ ಕಾರ್ಯಕ್ರಮ

ಬೆಳ್ತಂಗಡಿ,ಮಾ.4: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ ಇದರ ವತಿಯಿಂದ ಧಾರ್ಮಿಕ ಕಾರ್ಯಕ್ರಮ ಮಾ.5 ರಂದು ಸಂಜೆ 7.ಕ್ಕೆ ಚಾರ್ಮಾಡಿ ಜಂಕ್ಷನ್ ನಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಜಿಲ್ಲಾಧ್ಯಕ್ಷರಾದ ಜಾಫರ್ ಸಾಧಿಕ್ ಫೈಝಿ ವಹಿಸಲಿದ್ದಾರೆ.
ಚಾರ್ಮಾಡಿ ಜುಮಾ ಮಸೀದಿ ಖತೀಬರಾದ ಶರೀಫ್ ಫೈಝಿ ದುಆ ಹಾಗೂ ಉದ್ಟಾಟನೆಯನ್ನು ನೆರೆವೇರಿಸಲಿದ್ದಾರೆ. ಅಬ್ದುಲ್ ರಝಾಕ್ ಉಪ್ಪಿನಂಗಡಿ ಇವರು ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದಲ್ಲಿ ಸಂದೇಶ ಭಾಷಣ ಮಾಡಲಿದ್ದಾರೆ. ‘ಪ್ರೀತಿಯ ತಾಯಿ’ ಎಂಬ ವಿಷಯದಲ್ಲಿ ಇಮ್ತಿಯಾಝ್ ತುಂಬೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಇದರ ಅಧ್ಯಕ್ಷರಾದ ಇಕ್ಬಾಲ್ ಬಂಗೇರ ಕಟ್ಟೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಜಿರೆ ಇದರ ಅಧ್ಯಕ್ಷರಾದ ಹೈದರ್ ನೀರ್‌ಸಾಲ್ ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಬಾ ಕ್ಷೇತ್ರ ಇದರ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಸಿ.ಅದ್ದು,ಹನೀಫ್,ಸಿದ್ದೀಕ್ ಅರೆಕ್ಕಲ್,ಸಿದ್ದೀಕ್ ಯು.ಪಿ.,ಫಾರೂಕ್ ಮಾಚಾರ್,ಮೂಸ ಕುಂಞ,ಮೊದಲಾದವರು ಭಾಗವಹಿಸಲಿದ್ದಾರೆ.ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





