ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ
.jpg)
ಕಾಸರಗೋಡು, ಮಾ.4: ನಿರುಪಯುಕ್ತ ನೀರಿನ ಟ್ಯಾ೦ಕ್ ನಲ್ಲಿ ಯುವತಿಯೋರ್ವಳ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಠಾಣೆಯ ಕುತ್ತಿಕೋಲ್ ನಲ್ಲಿ ನಡೆದಿದೆ.
ಪೂಕಾಯದ ರೇವತಿ ( 24) ಮೃತಪಟ್ಟವಳು ಎಂದು ಗುರುತಿಸಲಾಗಿದೆ.
ಶುಕ್ರವಾರ ಕ್ಷೇತ್ರವೊಂದರ ಉತ್ಸವಕ್ಕೆಂದು ತೆರಳಿದ್ದ ರೇವತಿ ಮನೆಗೆ ಮರಳಿರಲಿಲ್ಲ . ಇದರಿಂದ ಮನೆಯವರು ಶೋಧ ನಡೆಸಿದಾಗ ಮನೆಯ ಅಲ್ಪ ದೂರದ ಉಪಯೋಗ ಇಲ್ಲದ ನೀರಿನ ಟ್ಯಾ೦ಕ್ ನಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಆತ್ಮಹತ್ಯೆಯಾಗಿರಬಹುದು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಬೇಡಡ್ಕ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Next Story





