ಬೈಕ್‌ನಲ್ಲಿ ಬಂದು ಸರ ಅಪಹರಿಸಿದ ಕಳ್ಳರು

ಕೋಟ, ಮಾ.4: ಕೋಟತಟ್ಟು ಗ್ರಾಮದ ಶಾಂಭವಿ ಶಾಲೆಯ ಎದುರು ಗಡೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಮಾ.3ರಂದು ಸಂಜೆ 7:30ರ ಸುಮಾರಿಗೆ ಅಪರಿಚಿತರಿಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿಯನ್ನು ಅಪಹರಿಸಿರುವ ಬಗ್ಗೆ ವರದಿಯಾಗಿದೆ.
ಕೋಟ ಮೆಸ್ಕಾಂ ಕಛೇರಿ ಎದುರುಗಡೆ ನಿವಾಸಿ ಸದಾಶಿವ ಶೆಟ್ಟಿ ಎಂಬವರ ಪತ್ನಿ ಗುಲಾಬಿ ಶೆಡ್ತಿ(48) ಎಂಬವರು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಬೈಕಿನಲ್ಲಿ ಇಬ್ಬರು ಅಪರಿಚಿತರು ಬಂದರು.
ಅವರಲ್ಲಿ ಸುಮಾರು 25 ವರ್ಷದ ಪ್ರಾಯದ ಕಪ್ಪುಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ ಸಹ ಸವಾರ ಗುಲಾಬಿ ಶೆಡ್ತಿ ಕುತ್ತಿಗೆ ಯಲ್ಲಿದ್ದ 80,000ರೂ ಮೌಲ್ಯದ 4ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಇಬ್ಬರು ಬೈಕಿನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





