ಕೊಲ್ಲಂ:ಯೋಧ ರಾಯ್ ಅಂತ್ಯಸಂಸ್ಕಾರ

ಕೊಲ್ಲಂ,ಮಾ.4: ನಾಸಿಕ್‌ನ ಸೇನಾ ಶಿಬಿರದಲ್ಲಿ ನಿಗೂಢ ಸಾವನ್ನಪ್ಪಿದ ಯೋಧ ರಾಯ್ ಮ್ಯಾಥ್ಯೂ ಅವರ ಅಂತ್ಯಸಂಸ್ಕಾರವು ಶನಿವಾರ ಮಧ್ಯಾಹ್ನ ಅವರ ತವರೂರು ಕೊಲ್ಲಂ ಜಿಲ್ಲೆಯ ಕರುವೇಲಿಯಲ್ಲಿ ನಡೆಯಿತು. ಇದಕ್ಕೂ ಮುನ್ನ ತಿರುವನಂತಪುರದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡನೇ ಬಾರಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು.
ತ್ರಿವಣ ಧ್ವಜದಲ್ಲಿ ಸುತ್ತಲಾಗಿದ್ದ ಶವಪೆಟ್ಟಿಗೆಯನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದ್ದು,ನೂರಾರು ಜನರು ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ಬಳಿಕ ಸ್ಥಳೀಯ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ತಿರುವನಂತಪುರದಿಂದ ಕೊಲ್ಲಂಗೆ ಪಾರ್ಥಿವ ಶರೀರವನ್ನು ಸಾಗಿಸುವ ಮುನ್ನ ಕೆಪಿಸಿಸಿ ಅಧ್ಯಕ್ಷ ವಿ.ಎಂ.ಸುಧೀರನ್ ಅವರು ಪುಷ್ಪಾಂಜಲಿಗಳನ್ನು ಸಲ್ಲಿಸಿದರು.
Next Story