ಕಿಡಿಗೇಡಿಗಳಿಂದ ಹಿಟಾಚಿಗೆ ಬೆಂಕಿ: 15ಲಕ್ಷ ರೂ. ನಷ್ಟ

ಕೋಟ, ಮಾ.4: ಯಡಾಡಿ ಮತ್ಯಾಡಿ ಗ್ರಾಮದ ಮತ್ಯಾಡಿ ಬಳೆಗಾರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿಲ್ಲಿಸಲಾದ ಹಿಟಾಚಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಮಾ.3ರಂದು ರಾತ್ರಿ ವೇಳೆ ನಡೆದಿದೆ.
ಕೋಟೇಶ್ವರ ಅಂಕದಕಟ್ಟೆಯ ಸಂತೋಷ್ ಶೆಟ್ಟಿ ಎಂಬವರಿಗೆ ಸೇರಿದ ಹಿಟಾಚಿಯನ್ನು ಅದರ ಚಾಲಕ ನಿನ್ನೆ ಸಂಜೆ ನಿಲ್ಲಿಸಿ ಹೋಗಿದ್ದು, ರಾತ್ರಿ ವೇಳೆ ಕಿಡಿಗೇಡಿಗಳು ಹಿಟಾಚಿಗೆ ಬೆಂಕಿ ಹಾಕಿದ ಪರಿಣಾಮ ಹಿಟಾಚಿಯು ಸಂಪೂರ್ಣ ಸುಟ್ಟು ಹೋಗಿ 15 ಲಕ್ಷ ರೂ. ನಷ್ಟ ಉಂಟಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





