ಮಂಗಳೂರು: ಮಾ.5ರಂದು ಸಲಫಿ ಸಮಾವೇಶ
ಮಂಗಳೂರು, ಮಾ. 4: ಕರ್ನಾಟಕ ಸಲಫಿ ಅಸೋಸಿಯೇಶನ್ ವತಿಯಿಂದ ನಗರದ ಎನ್‌ಜಿಎ ಸಭಾಂಗಣದಲ್ಲಿ ಸಲಫಿ ಸಮಾವೇಶ ನಡೆಯಲಿದೆ.
ಬೆಳಗ್ಗೆ 9:30ರಿಂದ 12 ಗಂಟೆಯವರೆಗೆ ಮಹಿಳೆಯರಿಗಾಗಿ ಝರಾನಾ ನವಾಝ್ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಸಂಜೆ 4: 30ರಿಂದ 10 ಗಂಟೆಯವರೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಮೌಲಾನಾ ನಜೀಬ್ ಬಕಾಲಿ ಅವರು ಉರ್ದು ಭಾಷೆಯಲ್ಲಿ ಮಾತನಾಡಲಿದ್ದಾರೆ.
ಮೌಲವಿ ಫದ್ಲುಲ್ ಹಖ್ ಉಮ್ರಿ, ಮೌಲವಿ ಅಬ್ದುಲ್ ಮಲಿಕ್ ಸಲಫಿ, ಫೈಸಲ್ ಮೌಲವಿ ಪುತ್ತುಪರಂಬ್ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





