ಉಡುಪಿ: ದಲಿತ ವಚನಕಾರರ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ
ಉಡುಪಿ, ಮಾ.4: ದಲಿತ ವಚನಕಾರರ ಜಯಂತಿ ಆಚರಣೆಯನ್ನು ಮಾ.10 ರಂದು ಪಿಪಿಸಿ ಕಾಲೇಜಿನಲ್ಲಿ ನಡೆಸಲು ಇಂದು ಅಪರ ಜಿಲ್ಲಾಧಿಕಾರಿ ಅನುರಾಧ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಲಾ ಮಕ್ಕಳಿಗೆ ದಲಿತ ವಚನಕಾರರ ವಚನಗಾಯನ ಸ್ಪರ್ಧೆ ಆಯೋಜಿಸಿ ಐದು ಬಹುಮಾನಗಳನ್ನು ನೀಡಲು ಅಪರ ಜಿಲ್ಲಾಧಿಕಾರಿ ಸೂಚಿಸಿದರು. ಸರಕಾರಿ ಹೆಣ್ಣುಮಕ್ಕಳ ಕಾಲೇಜಿನಲ್ಲಿ ಮಾ.8ರಂದು ಈ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಪಿಪಿಸಿ ಕಾಲೇಜಿನ ಕನ್ನಡ ಪ್ರಾಚಾರ್ಯರಾದ ಡಾ.ಶ್ರೀಕಾಂತ್ ಸಿದ್ದಾಪುರ ಸಂಪನ್ಮೂಲವ್ಯಕ್ತಿಗಳಾಗಿ ದಲಿತ ವಚನಕಾರರ ಬಗ್ಗೆ ಉಪನ್ಯಾಸ ನೀಡಲಿರುವರು.
ಸಭೆಯಲ್ಲಿ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ರಮೇಶ್, ಮಹಿಳಾ ಮತ್ತು ಮಕ್ಕಳ ಇಲಾಖೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣಿಮ ಕಾರ್ಯಕ್ರಮದ ಕುರಿತು ವಿವರಿಸಿದರು.
Next Story





