ಕಲ್ಪ ಟ್ರಸ್ಟ್‌ನಿಂದ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ
ಮಂಗಳೂರು, ಮಾ.4: ಕಲ್ಪಟ್ರಸ್ಟ್ ಮತ್ತು ಸೇವಾ ಭಾರತಿಯ ವತಿಯಿಂದ ಶನಿವಾರ ನಗರದ ಚೇತನಾ ವಿಶೇಷ ಮಕ್ಕಳ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಸಂಸದ ನಳಿನ್ ಕುಮಾರ್ ಕಟೀಲು ಶನಿವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜನ ಸಾಮಾನ್ಯನಿಗೆ ಯೋಜನೆಗಳು ತಲುಪಬೇಕು. ಆಗ ಮಾತ್ರ ಸರಕಾರದ ಪ್ರಯತ್ನ ಸಲವಾಗಲು ಸಾಧ್ಯ ಎಂದರು. ಸೇವಾ ಭಾರತಿಯ ವಿಶ್ವಸ್ಥ ವಿನೋದ್ ಶೆಣೈ, ಸಂಪನ್ಮೂಲ ವ್ಯಕ್ತಿಗಳಾದ ಡಿಐಸಿ ಇದರ ಸಹಾಯಕ ನಿರ್ದೇಶಕ ವಿವೇಕಾನಂದ, ಮಂಗಳೂರು ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಅರವಿಂದ ಪಾಣೇರಿ, ಆರ್ಥಿಕ ಸಲಹಾ ಕೇಂದ್ರದ ಸಲಹೆಗಾರ ರವೀಂದ್ರ ಬಲ್ಲಾಳ್ ಉಪಸ್ಥಿತರಿದ್ದರು. ಕೆನರಾ ಕಾಲೇಜಿನ ಉಪನ್ಯಾಸಕಿ, ಕಲ್ಪಟ್ರಸ್ಟ್‌ನ ಪ್ರಮೀಳಾ ರಾವ್ ಸ್ವಾಗತಿಸಿದರು.
Next Story





