ಪದವಿನಂಗಡಿ: ಮಾ.5ರಂದು ಆ್ಯಪಲ್ ಫ್ಲೈ ಮಾರಾಟ-ಸೇವಾ ಮಳಿಗೆ ಉದ್ಘಾಟನೆ

ಮಂಗಳೂರು, ಮಾ.4: ಕಚೇರಿ, ಮನೆಗಳ ಒಳಾಂಗಣಗಳ ಉತ್ಪನ್ನಗಳ ಮಾರಾಟ ಮಳಿಗೆ ಎ.ಕೆ. ಗ್ರೂಪ್‌ನ ‘ಆ್ಯಪಲ್ ಫ್ಲೈ’ ನಗರದ ಪದವಿನಂಗಡಿಯಲ್ಲಿ ಆರಂಭಿಸಲಿರುವ ಮಾರಾಟ ಮತ್ತು ಸೇವಾ ಮಳಿಗೆ ಮಾ.5ರಂದು ಉದ್ಘಾಟನೆಗೊಳ್ಳಲಿದೆ.
‘ಆ್ಯಪಲ್ ಫ್ಲೈ’ ಐಎಸ್‌ಒ 900: 2008 ಪ್ರಮಾಣೀತ ಕಂಪೆನಿ ಯಾಗಿದ್ದು, ಫ್ಲೈವುಡ್, ಆರ್ಕಿಟೆಕ್ ಫ್ಲೈವುಡ್ಸ್, ಬ್ಲಾಕ್ ಬೋರ್ಡ್, ಫೈನ್ ಬ್ಲಾಕ್ ಬೋರ್ಡ್, ಫ್ಲಶ್ ಡೋರ್, ಫೈನ್ ಫ್ಲಶ್ ಡೋರ್ಸ್, ಮರೈನ್ ಫ್ಲೈ, ಫ್ಲೆಕ್ಸ್ ಫ್ಲೈವುಡ್, ಫಿಂಗರ್ ಜಾಯಿಂಟೆಡ್ ರಬ್‌ವುಡ್, ಫಿಲ್ಮ್ ಫೇಸ್ಡ್ ಫ್ಲೈವುಡ್. ಪವರ್ ರೆಸಿಸ್ಟೆಡ್ ಫ್ಲೈವುಡ್, ವೌಲ್ಡಿಂಗ್ ಡೋರ್, ಡಿಸೈನ್ ಡೋರ್ಸ್, ಮೊಸೊನೈಟ್ ವೌಲ್ಡೆಡ್ ಡೋರ್ಸ್, ವೀನಿಯರ್ ಡೋರ್, ಎಂಡಿಎಫ್, ಪಾರ್ಟಿಸ್ಲೆ ಬೋರ್ಡ್, ಲ್ಯಾಮಿನೇಟ್, ಡೆಕೊರೇ ಟಿವ್ ವೀನಿಯರ್, ಶಟರಿಂಗ್ ಫ್ಲೈವುಡ್, ಇಂಟರ್‌ಲಾಕ್ಸ್, ಡಿಸೈನರ್ ಟೈಲ್ಸ್ ಸೇರಿ ದಂತೆ ಹಲವು ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಸದಸ್ಯತ್ವ ಹೊಂದಿರುವ ಸಂಸ್ಥೆಯು, ಸಿವಿಐ ಸರ್ಟಿಫೈಡ್ ಪ್ರಾಡಕ್ಟ್ ಪ್ರಮಾಣೀಕೃತವಾಗಿದೆ.
ದೇಶೀಯ ಫ್ಲೈವುಡ್ ಮಾರುಕಟ್ಟೆ ಯಲ್ಲಿ ಅತ್ಯುತ್ತಮ ಪಾಲನ್ನು ಹೊಂದಿ ರುವ ‘ಆ್ಯಪಲ್ ಫ್ಲೈ’ ಬಿಐಎಸ್ ನಿಗದಿಪಡಿಸಿರುವ ಗುಣಮಟ್ಟದ ಅನ್ವಯ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.





