ಅಮೆರಿಕದಲ್ಲಿ ಓರ್ವ ಸಿಖ್ ವ್ಯಕ್ತಿಯ ಮೇಲೆ ಗುಂಡಿನ ದಾಳಿ

ನ್ಯೂಯಾರ್ಕ್, ಮಾ.5: ಅಮೆರಿಕಾದಲ್ಲಿ ಸಿಖ್ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
39 ವರ್ಷದ ದೀಪಾ ರಾಯ್ ಗಾಯಗೊಂಡಿರುವ ಸಿಖ್ ವ್ಯಕ್ತಿ. ದೀಪಾ ರಾಯ್ ಅವರು ವಾಷಿಂಗ್ಟನ್ ನ ಕೆಂಟ್ ನಲ್ಲಿರುವ ತಮ್ಮ ಮನೆಯ ಮುಂದೆ ವಾಹನದ ಕೆಲಸ ಮಾಡುತ್ತಿದ್ದ ವೇಳೆ ಬಂದ ಅಪರಿಚಿತ ವ್ಯಕ್ತಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ನಿಮ್ಮ ದೇಶಕ್ಕೆ ವಾಪಸ್ ಹೋಗು ಎಂದು ಕೂಗಿದ್ದಾನೆ ಎಂದು ತಿಳಿದು ಬಂದಿದೆ. ದೀಪಾ ರಾಯ್ ಅವರ ತೋಳಿಗೆ ಗುಂಡಿನ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





