ಮುಂಡಗೋಡ: ಅಕೇಶಿಯಾ ನಡುತೋಪಿಗೆ ಬೆಂಕಿ
.jpg)
ಮುಂಡಗೋಡ: ಇಲಾಖೆ ನಿರ್ಲಕ್ಷ್ಯದಿಂದ ಆಕಸ್ಮಿಕವಾಗಿ ಹತ್ತಿದ ಬೆಂಕಿ ಸುಮಾರು 30ರಿಂದ 40 ಎಕರೆ ಅರಣ್ಯ ಹಾಗೂ ಅರಣ್ಯದಲ್ಲಿದ್ದ ಬೆಳೆಸಿದ ಆಕಾಶಿಯಾ ನಡುತೋಪು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಇಂದೂರ ಗ್ರಾಮ ಪಂಚಾಯತ ವ್ಯಾಪ್ತೀಯ ಸಂಜೆಯನಗರಕ್ಕೆ ಹತ್ತಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಇಂದು ನಡೆದಿದೆ.
ರವಿವಾರ ಬೆಳಗ್ಗೆಯಿಂದ ಹತ್ತಿದ ಬೆಂಕಿ ಸಾಯಂಕಾಲ ನಾಲ್ಕು ಘಂಟೆಯವರೆಗೂ ಉರಿದ ಬೆನ್ನಲ್ಲಿ ಸುಮಾರು 30ರಿಂದ 40 ಎಕರೆ ಅರಣ್ಯ ಹಾಗೂ ಅರಣ್ಯದಲ್ಲಿದ್ದ ಬೆಳೆಸಿದ ಆಕಾಶಿಯಾ ನಡುತೋಪು ಸಂಪೂರ್ಣ ಬೆಂಕಿಗೆ ಆಹುತಿಯಾದರೂ, ಅರಣ್ಯ ಸಿಬ್ಬಂದಿ ಯಾರು ಸ್ಥಳಕ್ಕಾಗಮಿಸದೆ ಅರಣ್ಯದಂಚಿನಲ್ಲಿನ ಹೊಲದಲ್ಲಿದ್ದ ರೈತರು ಬಂದು ನಂದಿಸಲು ಪ್ರಯತ್ನಿಸುವಷ್ಟರಲ್ಲಿ ಅರಣ್ಯದಲ್ಲಿನ ಬೆಲೆ ಬಾಳುವ ಮರಗಳು ಬೆಂಕಿಗೆ ಆಹುತಿಯಾಗಿದ್ದವು.
Next Story





