ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಗೆ ಸೈನಾ ಸಜ್ಜು
ಹೊಸದಿಲ್ಲಿ, ಮಾ.5: ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಮರಳಿರುವ ಉತ್ತಮ ಹೋರಾಟದ ಹುಮ್ಮಸ್ಸಿನಲ್ಲಿರುವ ಭಾರತದ ಶಟ್ಲರ್ ಸೈನಾ ನೆಹ್ವಾಲ್ ಮುಂದಿನ ವಾರ ಆರಂಭವಾಗಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ.
‘‘ವಿಶ್ವದ ಓರ್ವ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿಯಾಗುವುದು ನನ್ನ ಗುರಿ. ಶ್ರೇಷ್ಠ ಆಟಗಾರರಿಂದ ಪ್ರಬಲ ಪ್ರತಿರೋಧ ಎದುರಿಸುವುದು ಬ್ಯಾಡ್ಮಿಂಟನ್ ಆಟದ ನಿಜವಾದ ಆನಂದವಾಗಿದೆ. 2015ರ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ಅಪ್ ಆಗಿದ್ದೆ. ಕ್ಯಾರೊಲಿನಾ(ಮರಿನ್)ರನ್ನು ಎದುರಿಸುವುದು ದೊಡ್ಡ ಸವಾಲು. ನಾನೀಗ ಸಂಪೂರ್ಣ ಫಿಟ್, ಉತ್ತಮ ತಯಾರಿ ನಡೆಸಿದ್ದು, ನನ್ನ ಎದುರಾಳಿಯನ್ನು ಎದುರಿಸಲು ತಯಾರಿದ್ದೇನೆ’’ ಎಂದು ಸೈನಾ ನುಡಿದರು.
Next Story





