ಎ.ಕೆ. ಗ್ರೂಪ್‌ನ ನೂತನ ಮಳಿಗೆ ‘ಆ್ಯಪಲ್ ಪ್ಲೈ’ ಶುಭಾರಂಭ

ಮಂಗಳೂರು, ಮಾ.5: ಕಚೇರಿ, ಮನೆಗಳ ಒಳಾಂಗಣ ಉತ್ಪನ್ನಗಳ ಮಾರಾಟ ಮಳಿಗೆ ಎ.ಕೆ. ಸಮೂಹ ಸಂಸ್ಥೆಯ ನೂತನ ಮಳಿಗೆ ‘ಆ್ಯಪಲ್ ಪ್ಲೈ’ ನಗರದ ಪದವಿನಂಗಡಿಯಲ್ಲಿ ಇಂದು ಶುಭಾರಂಭಗೊಂಡಿತು.
ಸಂಸ್ಥೆಯ ನೂತನ ಉತ್ಪನ್ನದ ಉದ್ಘಾಟನೆಯನ್ನು ಸುಧಾಕರ್ ಪೈ, ವರ್ಲ್ಡ್ ವೈಡ್ ವೆಬ್ ಶಿಪ್ಪಿಂಗ್ ಕಂಪೆನಿಯ ಮೊದಿನ್, ಮುಹಮ್ಮದ್ ಅರಬಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮೇಯರ್ ಹರಿನಾಥ್ ಎಂ., ಎ.ಕೆ.ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಅಹ್ಮದ್, ಮಹಾಬಲೇಶ್ವರ ಗ್ರೂಪ್‌ನ ಕೆ.ಸಿ.ನಾಯ್ಕ್, ಮೊಹ್ತೆಶಾಂ ಬಿಲ್ಡರ್ಸ್‌ನ ಅರ್ಶದ್, ಎ.ಕೆ.ಗ್ರೂಪ್‌ನ ನಿರ್ದೇಶಕರಾದ ನಿಯಾಝ್ ಎ.ಕೆ., ಸಾಜಿದ್ ಎ.ಕೆ., ನಾಝಿಮ್ ಎ.ಕೆ.,ನೌಶಾದ್ ಎ.ಕೆ., ಪ್ರಶಾಂತ್, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನೂತನ ಮಳಿಗೆಯಲ್ಲಿ ಮರೈನ್ ಪ್ಲೆವುಡ್, ಹಾರ್ಡ್‌ವೇರ್, ವಿನೀರ್, ಲ್ಯಾಮಿನೇಟ್, ವಿವಿಧ ಡೋರ್‌ಗಳ ವಿಫುಲ ಸಂಗ್ರಹವಿದೆ.ಬ್ಲೊಕ್ ಬೋರ್ಡ್, ಫ್ಲಶ್ ಡೋರ್, ಮೊಲ್ಡೆಡ್ ಡೋರ್, ವಿನೀರ್ ಡೋರ್, ಎಂಡಿಎಫ್, ಪಾರ್ಟಿಕಲ್ ಬೋರ್ಡ್, ಪ್ರೀಲಂ, ಡೆಕೊರೇಟಿವ್ ವಿನೀರ್, ಶಟರಿಂಗ್ ಪ್ಲೈವುಡ್, ಇಂಟರ್‌ಲಾಕ್, ಡಿಸೈನರ್ ಟೈಲ್, ವಿನಿಲ್ ಪ್ಲ್ಯಾಂಕ್, ಟೀಕ್ ಬೀಡಿಂಗ್, ಪಿವಿಸಿ ಬೋರ್ಡ್ ಇತ್ಯಾದಿಗಳ ಸಂಗ್ರಹವಿದೆ.





