ಆಸ್ಟ್ರೇಲಿಯ 276ಕ್ಕೆ ಆಲೌಟ್; 87 ರನ್ ಮುನ್ನಡೆ

ಬೆಂಗಳೂರು,ಮಾ.6: ಇಲ್ಲಿ ನಡೆಯುತ್ತಿರುವ ಎರಡನೆ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯ 87 ರನ್ ಗಳ ಮುನ್ನಡೆ ಸಾಧಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ನಲ್ಲಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್ ನಲ್ಲಿ 122.4 ಓವರ್ ಗಳಲ್ಲಿ 276 ರನ್ ಗಳಿಗೆ ಆಲೌಟಾಗಿದೆ.
ಎರಡನೆ ದಿನದಾಟದಂತ್ಯಕ್ಕೆ 106 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 237 ರನ್ ಗಳಿಸಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ 39 ರನ್ ಸೇರಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿದೆ.
ಮ್ಯಾಥ್ಯೂ ವೇಡ್ 40 ರನ್, ಮಿಷೆಲ್ ಸ್ಟಾರ್ಕ್ 26 ರನ್, ಲಿಯೊನ್ 0, ಹೇಝಲ್ ವುಡ್ 1ರನ್ ಗಳಿಸಿ ಔಟಾದರು. ಓ' ಕೀಫೆ 4 ರನ್ ಗಳಿಸಿ ಔಟಾಗದೆ ಉಳಿದರು.
ಆಲ್ ರೌಂಡರ್ ರವೀಂದ್ರ ಜಡೇಜ 63ಕ್ಕೆ 6, ಆರ್ ಅಶ್ವಿನ್ 84ಕ್ಕೆ 2, ಇಶಾಂತ್ ಶರ್ಮ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದರು.
Next Story





