ಒಮನ್‌ನಲ್ಲಿ ಭಾರತದ ವ್ಯಕ್ತಿ ನೇಣಿಗೆ ಶರಣು

ನಿಸ್ವ,ಮಾ.6: ಕೇರಳದ ಕೊಲ್ಲಂನ ವ್ಯಕ್ತಿಯೊಬ್ಬರು ನೇಣುಹಾಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತವ್ಯಕ್ತಿಯನ್ನು ಆಂಟನಿಬೋಸ್(40)ಎಂದು ಗುರುತಿಸಲಾಗಿದೆ.
ಅಲ್‌ಅತ್ಯಾಬ್ ಬೇಕರಿಯ ನಿಸ್ವ ಬ್ರಾಂಚ್‌ನಲ್ಲಿ ಅವರು ಉದ್ಯೋಗದಲ್ಲಿದ್ದರು. ಕರ್ಷದ ಅಂಗಡಿಯ ಮಹಡಿಯ ವಾಸವಿದ್ದ ಕೋಣೆಯಲ್ಲಿ ಘಟನೆ ನಡೆದಿದೆ. ಕೋಣೆಯಲ್ಲಿ ಇಬ್ಬರು ಮಾತ್ರ ವಾಸವಿದ್ದರು. ಅವರ ಸಂಗಡಿಗ ಬೆಳಗ್ಗೆ ನಾಲ್ಕುಗಂಟೆಗೆ ಡ್ಯೂಟಿಗೆ ತೆರಳಿದ್ದಾನೆ. ಆನಂತರ ಬೋಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಐದೂವರೆಗೆ ಬೋಸ್ ಡ್ಯೂಟಿಗೆ ತೆರಳಬೇಕಿತ್ತು. ಯಾಕೆ ಬಂದಿಲ್ಲ ಎಂದು ಹುಡುಕುತ್ತಾ ಹೋದಾಗ ಕೋಣೆಯ ಬಾಗಿಲು ಮುಚ್ಚಿಡಲಾಗಿತ್ತು. ಬಾಗಿಲನ್ನು ಒಡೆದು ಒಳಗೆ ಹೋದಾಗ ಮೃತದೇಹ ಕಂಡು ಬಂದಿದೆ. ಹಿಂದಿನ ದಿವಸ ಬೋಸ್ ಬಹಳ ಸಂತಸದಿಂದಿದ್ದರು ಎಂದು ಸಹಕೆಲಸಗಾರರು ಹೇಳಿದ್ದಾರೆ.
ಒಮನ್‌ನಲ್ಲಿ ಅವರು ಕಳೆದ ಹದಿನೈದು ವರ್ಷಗಳಿಂದ ದುಡಿಯುತ್ತಿದ್ದಾರೆ. ಬೇಕರಿ ಕೆಲಸಕ್ಕೆ ಐದು ವರ್ಷದ ಹಿಂದೆ ಸೇರಿದ್ದರು. ಏಳು ತಿಂಗಳ ಹಿಂದೆ ಊರಿಗೆ ಹೋಗಿ ಬಂದಿದ್ದರು. ಅವರ ಇಬ್ಬರು ಸಹೋದರರು ಕೂಡಾ ಒಮನ್‌ನಲ್ಲಿ ದುಡಿಯುತ್ತಿದ್ದಾರೆಂದು ವರದಿ ತಿಳಿಸಿದೆ.





