9 ವರ್ಷದ ಬಾಲಕಿ ನಿಗೂಢ ಸಾವು: ಕೊಲೆ ಶಂಕೆ

ಪಾಲಕ್ಕಾಡ್,ಮಾ.6: ವಾಳಯಾರ್ ಅಟ್ಟಪ್ಪಳ್ಳಂ ಪಾಂಬಾಂಪಳ್ಳ ಎಂಬಲ್ಲಿನ ಒಂಬತ್ತುವರ್ಷವಯಸ್ಸಿನ ಬಾಲಕಿ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದು ಕೊಲೆ ಎಂದು ವ್ಯಾಪಕ ಶಂಕೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಶ್‌ಕುಮಾರ್‌ರ ಸೂಚನೆ ಪ್ರಕಾರ ಎ.ಎಸ್ಪಿ ಜಿ. ಪುಂಗುಯಲಿ ತನಿಖೆಯ ನೇತೃತ್ವವಹಿಸಿಕೊಂಡಿದ್ದು ಶಂಕಿತರನ್ನು ತನಿಖೆಗೆ ಗುರಿಪಡಿಸಿದ್ದಾರೆ. ಪಾಂಬಾಂಪಳ್ಳದ ಶಾಜಿಯ ಪುತ್ರಿ ಶರಣ್ಯ ಶನಿವಾರ ಸಂಜೆ ಹಾಕಿಕೊಂಡಿದ್ದಳು. ಅವಳು ಅಟ್ಟಪ್ಪಳ್ಳಂ ಸರಕಾರಿ ಕಿರಿಯ ಪ್ರಾಥಮಿಕ ನಾಲ್ಕನೆ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.
ಮರಣೋತ್ತರ ನಡೆಸಿದ ಜಿಲ್ಲಾಸ್ಪತ್ರೆಯ ಹಿರಿಯ ಪೊಲೀಸ್ ಸರ್ಜನ್‌ರ ಸೂಚನೆ ಪ್ರಕಾರ ಕೊಲೆ ಸಾಧ್ಯತೆ ತನಿಖೆ ನಡೆಸಲಾಗುತ್ತಿದೆ. 12 ವರ್ಷಕ್ಕಿಂತ ಕೆಳ ವಯೋಮಾನದ ಮಕ್ಕಳ ನೇಣು ಕೊಲೆಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಸಲಹೆ ನೀಡಿದ್ದು, ಆದರೆ ಬಾಲಕಿಯ ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಸಣ್ಣ ಮಕ್ಕಳಲ್ಲಿ ಇಂತಹ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಇದೇ ಮನೆಯಲ್ಲಿ 52 ದಿವಸ ಮೊದಲು ಶರಣ್ಯಳ ಅಕ್ಕ 14 ವಯಸ್ಸಿನ ಸಹೋದರಿ ಹೃತ್ವಿಕಾ ಕೂಡಾ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಹೃತ್ವಿಕಾ ಶರಣ್ಯಳ ತಾಯಿ ಭಾಗ್ಯವತಿಯ ಮೊದಲ ಪತಿಯ ಪುತ್ರಿಯಾಗಿದ್ದಾಳೆ.ಸಹೋದರಿ ಮೃತಳಾದ್ದನ್ನು ಮೊದಲು ಶರಣ್ಯಳೆ ನೋಡಿದ್ದಳು. ಈ ಸಂದರ್ಭದಲ್ಲಿ ಮುಖವಾಡ ಧರಿಸಿದ್ದ ಇಬ್ಬರು ಮನೆಯಿಂದ ಓಡಿ ಹೋಗಿದ್ದು ತಾನು ಕಂಡಿದ್ದೇನೆ ಎಂದು ಶರಣ್ಯ ಸಾಕ್ಷಿ ಹೇಳಿದ್ದಳು. ಬಾಲಕಿಯನ್ನು ಕೌನ್ಸಿಲಿಂಗ್ ನಡೆಸದಂತೆ ತಂದೆತಾಯಿಯೇ ಅಡ್ಡಿಯಾಗಿದ್ದರು.
ಮನೆಯ ಕೆಟ್ಟ ಪರಿಸ್ಥಿತಿ ಶರಣ್ಯಳ ಸಾವಿನ ಕುರಿತು ಶಂಕೆ ಸೃಷ್ಟಿಸುತ್ತಿದೆ ಎಂದು ಊರವರು ಹೇಳುತ್ತಿದ್ದಾರೆ. ತಂದೆ ತಾಯಿ ಇಬ್ಬರೂ ಮದ್ಯಪಾನಿಗಳು. ಅವರು ಪರಸ್ಪರ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಘಟನೆ ನಡೆದ ದಿವಸ ಸಂಜೆನಾಲ್ಕೂವರೆ ಗಂಟೆಗೆ ಶರಣ್ಯ ಹೊರಗೆ ಆಟವಾಡುತ್ತಿರುವುದನ್ನು ನೋಡಿದವರಿದ್ದಾರೆ.
ಹೃತ್ವಿಕಾಳ ಸಾವಿನ ತನಿಖೆಯನ್ನು ಪೊಲೀಸರು ಸರಿಯಾಗಿ ನಡೆಸಲಿಲ್ಲ ಎಂದು ಆರೋಪ ಕೇಳಿಬಂದಿದೆ.ಸಹೋದರಿ ಸಾವಿನ ಕುರಿತು ಶರಣ್ಯಳನ್ನು ಕೌನ್ಸಿಲಿಂಗ್ ಮಾಡದೆ ಶಿಶುಕಲ್ಯಾಣ ಸಮಿತಿ ಕೂಡಾ ಪ್ರಮಾದ ವೆಸಗಿದೆ ಎಂದು ವರದಿ ತಿಳಿಸಿದೆ.







