ಕೇರಳದ 3 ಜಿಲ್ಲೆಗಳಲ್ಲಿ ಇಂದು ಹರತಾಳ

ತೊಡುಪುಝ/ಕೋಟ್ಟಯಂ/ಪತ್ತಣಂತಿಟ್ಟ,ಮಾ.6: ಕಸ್ತೂರಿರಂಗನ್ ವರದಿಯ ಅಂತಿಮ ಪ್ರಕಟಣೆ ಹೊರಡಿಸದಿದ್ದುದನ್ನು ಪ್ರತಿಭಟಿಸಿ ಇಡುಕ್ಕಿ ಜಿಲ್ಲೆಯಲ್ಲಿ ಸಂಪೂರ್ಣ, ಕೋಟ್ಟಯಂನಲ್ಲಿ ಐದು ಪಂಚಾಯತ್‌ಗಳಲ್ಲಿ, ಪತ್ತಣಂತಿಟ್ಟ ಜಿಲ್ಲೆಯ ಎಂಟು ಪಂಚಾಯತ್‌ಗಳಲ್ಲಿ ಸೋಮವಾರ ಬೆಳಗ್ಗೆ ಆರುಗಂಟೆಯಿಂದ ಸಂಜೆ ಆರು ಗಂಟೆವರೆಗೆ ಹರತಾಳ ಆಚರಿಸಲಾಗುತ್ತಿದೆ.
ಇಡುಕ್ಕಿಯಲ್ಲಿ ಯುಡಿಎಫ್, ಕೇರಳ ಕಾಂಗ್ರೆಸ್ ಹರತಾಳಕ್ಕೆ ಕರೆ ನಿಡಿದ್ದು, ಹಾಲು, ಪತ್ರಿಕೆ, ಆಸ್ಪತ್ರೆ, ಕುಡಿಯುವ ನೀರು, ಔಷಧ ಅಂಗಡಿ ಮುಂತಾದುದು ಹರತಾಳದಿಂದ ವಿನಾಯಿತಿ ನೀಡಲಾಗಿದೆ. ಮದುವೆ, ಮರಣ ಮುಂತಾದ ತುರ್ತು ಸಮಾರಂಭಗಳಿಗೆ ವಿವಿಧ ಪ್ರವಾಸಿಗರಿಗೆ ಹರತಾಳ ಬಾಧಕವಲ್ಲ ಎಂದು ಯುಡಿಎಫ್ ಇಡುಕ್ಕಿ ಜಿಲ್ಲೆ ಅಧ್ಯಕ್ಷ ಅಡ್ವಕೇಟ್ ಎಸ್. ಅಶೋಕನ್ ತಿಳಿಸಿದ್ದಾರೆ.
ಕಾಂಗ್ರೆಸ್ ಕರೆನೀಡಿದ ಹರತಾಳ ಕೋಟ್ಟಯಂ ಜಿಲ್ಲೆಯ ಮೇಲುಕ್ಕಾವೆ, ತಿಕ್ಕೋಯಿ, ಪುಂಞಾರ್ ತೆಕ್ಕಕ್ಕರ, ಕುಟ್ಟಿಕ್ಕಲ್, ಪುಂಞಾರ್ ಪಂಚಾಯತ್‌ಗಳಲ್ಲಿ ಪತ್ತಣಂತಿಟ್ಟ ಜಿಲ್ಲೆಯಲ್ಲಿಪೆರುನಾಡ್, ವಡಶ್ಶೇರಿಕರ, ವೆಚ್ಚುಚಿರ, ನಾರಾಣಂಮುಯಿ, ಚಿಟ್ಟೂರ್, ಸೀದಾತ್ತೋಡ್, ತಣ್ಣಿತೋಡ್, ಅರುವಾಪ್ಪುಲಪಂಚಾಯತ್‌ಗಳಲ್ಲಿ ಹರತಾಳ ನಡೆಯಲಿದೆ ಎಂದು ವರದಿ ತಿಳಿಸಿದೆ.