ಯು.ಟಿ.ಖಾದರ್ ವಿರುದ್ಧ ಅವಹೇಳನಾಕಾರಿ ಪೋಸ್ಟರ್

ಬಂಟ್ವಾಳ, ಮಾ.3: ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ಸಂದರ್ಭದಲ್ಲಿ ’ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಿಂದ ಹೊಡೆಯಬೇಕು’ ಎಂಬ ಹೇಳಿಕೆ ನೀಡಿದ್ದ ರಾಜ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ರವರನ್ನು ಅವಮಾನಕಾರಿಯಾಗಿ ಚಿತ್ರಿಸಿದ ಫ್ಲೆಕ್ಸೊಂದನ್ನು ಕಿಡಿಗೇಡಿಗಳು ಬಿ.ಸಿ.ರೋಡು ಫ್ಲೈ ಓವರ್ ಪಿಲ್ಲರ್‌ಗೆ ಅಂಟಿಸಿರುವುದು ಇಂದು ಬೆಳಕಿಗೆ ಬಂದಿದೆ.
ಚಪ್ಪಲಿ ಅಂಗಡಿಯಲ್ಲಿ ಪೈಜಾಮ್ ಧರಿಸಿ ಕುಳಿತ ಯಾರೋ ಒಬ್ಬ ವ್ಯಕ್ತಿಯ ಫೋಟೊಗೆ ಸಚಿವ ಯು.ಟಿ.ಖಾದರ್‌ರ ಮುಖವನ್ನು ಫಿಕ್ಸ್ ಮಾಡಿ ಚಪ್ಪಲಿ ಮಾರಾಟಗಾರರಂತೆ ಬಿಂಬಿಸಿರುವ ಈ ಕರಪತ್ರ ಸೋಮವಾರ ಬೆಳಗ್ಗೆ ಬಿ.ಸಿ.ರೋಡು ಫ್ಲೈ ಓವರ್ ಪಿಲ್ಲರ್ ಮೇಲೆ ಅಂಟಿಸಿರುವುದು ಕಂಡು ಬಂದಿದೆ. ಕರಪತ್ರದ ಮೇಲೆ ’ಕಾಮರೆಡ್ ಪಿಣರಾಯಿ ವಿಜಯನ್ ಚಪ್ಪಲ್ ಶಾಪ್ ಎಂದು ಬರೆಯಲಾಗಿದ್ದು ಕೆಳಗೆ "ಮಾಲಕರು - ಯು.ಟಿ.ಖಾದರ್, ಕರ್ನಾಟಕ ಚಪ್ಪಲ್ ಸಚಿವರು" ಎಂದು ಮುದ್ರಿಸಲಾಗಿದೆ.
Next Story





