ವೀರಪ್ಪನ್ ಹಿಡಿಯಲು ತಾನು ಸಹಕರಿಸಿಲ್ಲ:ಅಬ್ದುಲ್ ನಾಸರ್ ಮಅದನಿ

ಬೆಂಗಳೂರು,ಮಾ. 6: ದಂತ ಚೋರ ವೀರಪ್ಪನ್‌ನನ್ನು ಕೊಲ್ಲಲುತಾನು ಸಹಕರಿಸಿದ್ದೇನೆಂದು ಮಾಜಿ ತಮಿಳ್ನಾಡು ಡಿಜಿಪಿ ನಟರಾಜನ್‌ರ ಹೇಳಿಕೆಯನ್ನು ಅಬ್ದುಲ್ ನಾಸರ್ ಮಅದನಿ ನಿರಾಕರಿಸಿದ್ದಾರೆ. ವೀರಪ್ಪನ್‌ನನ್ನು ಕೊಲ್ಲಲು ತಾನು ಪೊಲೀಸರಿಗೆ ಸಹಕರಿಸಿಲ್ಲ ಎಂದು ಅವರು ಹೇಳಿದರು.
ಫೇಸ್‌ಬುಕ್ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮಿಳ್ನಾಡು ಪೊಲೀಸರಿಗೆ ಸಹಾಯ ಮಾಡಿದ್ದೇನೆ ಎನ್ನುವ ರೀತಿಯಲ್ಲಿ ತಮಿಳ್ನಾಡಿನ ಮಾಜಿ ಡಿಜಿಪಿ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾದದ್ದು ತನ್ನನ್ನು ಸಿಲುಕಿಸಲು ಮಾಡಿದ ಸಂಚಾಗಿರಬಹುದೇ ಎನ್ನುವ ಸಂದೇಹ ಮೂಡುತ್ತಿದೆ ತನ್ನನ್ನು ವೀರಪ್ಪನ್‌ಗಿಂತಲು ದೊಡ್ಡ ಶತ್ರುವಿನಂತೆ ಅಂದಿನ ತಮಿಳ್ನಾಡು ಪೊಲೀಸರು ಮತ್ತು ಮುಖ್ಯಮಂತ್ರಿ ಜಯಲಲಿತಾ ಕಂಡಿದ್ದಾರೆ.
ಬಾಂಬು ಇಟ್ಟು ತನ್ನ ಬಲಗಾಲು ಕಳಕೊಳ್ಳುವಂತೆ ಮಾಡಿದ್ದ ಶತ್ರುಗಳನ್ನು ಕ್ಷಮಿಸುವ ಮೂಲಕ ಅವರನ್ನು ಖುಲಾಸೆಗೊಳಿಸಲು ನೆರವಾದ ವ್ಯಕ್ತಿ ನಾನು. ತನಗೆ ಯಾವ ಉಪಟಳವೂ ನೀಡದ ಒಬ್ಬ ವ್ಯಕ್ತಿಯನ್ನು ಕೊಲ್ಲುವುದಕ್ಕೆ ಯಾವುದಾದರೂ ರೀತಿಯಲ್ಲಿ ನೆರವು ನೀಡಬೇಕಾದ ಅಗತ್ಯವಿದೆಯೇ? ಎಂದು ಅಬ್ದುನ್ನಾಸರ್ ಮಅದನಿ ಹೇಳಿರುವುದಾಗಿ ವೆಬ್‌ಪೋರ್ಟಲೊಂದು ವರದಿಮಾಡಿದೆ.





