ಮಹಾರಾಷ್ಟ್ರದಲ್ಲಿ 19 ಹೆಣ್ಣು ಭ್ರೂಣಗಳ ಪತ್ತೆ!
.jpg)
ಮುಂಬೈ, ಮಾ.6: ಮಹಾರಾಷ್ಟ್ರದಲ್ಲಿ ಗರ್ಭಪಾತ ನಡೆಸಲಾದ 19 ಹೆಣ್ಣು ಭ್ರೂಣಗಳು ತೋಡಿಗೆ ಎಸೆದಿರುವುದು ಪತ್ತೆಯಾಗಿದೆ. ಸಾಂಗ್ಲಿ ಜಿಲ್ಲೆಯ ಗ್ರಾಮದ ತೋಡಿಗೆ ಸಮೀಪದಲ್ಲಿ ಇವು ಕಂಡು ಬಂದಿವೆ. ಗರ್ಭಪಾತದ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದ ಪ್ರಕರಣದ ತನಿಖೆಯ ವೇಳೆ ಈ ದಾರುಣ ಕೃತ್ಯ ಬೆಳಕಿಗೆ ಬಂದಿದೆ.
19 ಭ್ರೂಣಗಳ ಅವಶೇಷಗಳು ಪತ್ತೆಯಾಗಿದೆಯೆಂದು ಸಾಂಗ್ಲಿ ಎಸ್ಪಿ ದತ್ತಾತ್ರೇಯ ಸಿಂಧೆ ಹೇಳಿದರು. ಅವುಗಳನ್ನು ಹೊಂಡದಲ್ಲಿ ಮುಚ್ಚಿಹಾಕಲಾಗಿತ್ತು. ಗರ್ಭಿಣಿಯು ಫೆಬ್ರವರಿ 28ಕ್ಕೆ ಮೃತಪಟ್ಟ ಘಟನೆಯ ಕುರಿತು ಪೊಲೀಸ್ ತನಿಖೆ ನಡೆಸುತ್ತಿದೆ. ಮಹಿಳೆಯ ಸಾವಿನಲ್ಲಿ ಶಂಕೆಗೊಂಡ ಗ್ರಾಮಸ್ಥರು ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದರು.
ಈ ಮಹಿಳೆ ಮೂರನೆ ಬಾರಿ ಹೆಣ್ಣುಮಗುವಿಗೆ ಗರ್ಭ ಧರಿಸಿದಾಗ ಗರ್ಭಪಾತ ಮಾಡಿಸಲು ಪತಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಮಹಿಳೆಯ ತಂದೆ ತನ್ನ ಮಗಳ ಪತಿ ಗರ್ಭಪಾತ ನಡೆಸುವ ವಿಷಯವನ್ನು ತನಗೆ ತಿಳಿಸಿದ್ದಾನೆ. ಆಗ ತಾನು ವಿರೋಧಿಸಿದ್ದೆ,ಆದರೆ ಆತ ನಿರ್ಧಾರ ಬದಲಿಸಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





