ಉತ್ತರಖಂಡದಲ್ಲಿ 16ವರ್ಷದ ಮುಸ್ಲಿಮ್ ಯುವಕನ ಕಸ್ಟಡಿಸಾವು ಪ್ರಕರಣ: ಠಾಣಾಧಿಕಾರಿ ಸಹಿತ ನಾಲ್ವರ ಅಮಾನತು

ಕಾಶಿಪುರ್, ಮಾ.6 :ಉತ್ತರಖಂಡದ ಉಧಮ್ ಸಿಂಗ್ ಜಿಲ್ಲೆಯಲ್ಲಿ ಮುಸ್ಲಿಮ್ ಯುವಕ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಪ್ರಕರಣದಲ್ಲಿ ಕಟೋರ್ತಲ ಪೊಲೀಸ್ ಠಾಣಾಧಿಕಾರಿ ಸಹಿತ ನಾಲ್ವರು ಪೋಲೀಸರನ್ನು ಅಮಾನುತುಗೊಳಿಸಲಾಗಿದೆ ಎಂದು ಜಿಲ್ಲಾ ಎಎಸ್ಪಿ ತಿಳಿಸಿದ್ದಾರೆ.
ಕುಮಾವೂಂ ಪೊಲೀಸ್ ಉಪಮಹಾನಿರೀಕ್ಷಕ ಅಜಯ್ ರೌತೆಲಾ ಯುವಕನ ಅನುಮಾನಾಸ್ಪದ ಸಾವಿನ ತನಿಖೆಯನ್ನು ನೈನಿತಾಲ್ ಪೊಲೀಸರಿಂದ ನಡೆಸಲಾಗುವುದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪೊಲೀಸರು ಯುವಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆದರೆ ಯುವಕನ ಕುಟುಂಬದವರು ಯುವಕನನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆಂದು ಆರೋಪಿಸಿದ್ದಾರೆ. ಕಾಶಿಪುರ್ ಕೊತ್ವಾಲಿ ಕಾಜಿಬಾಗ್‌ನ ಅಪಹರಣ ಪ್ರಕರಣದಲ್ಲಿ ಹದಿನಾರುವರ್ಷದ ಯುವಕ ಝಿಯಾವುದ್ದೀನ್‌ನನ್ನು ಫೆ.26ರಂದು ಪೊಲೀಸರು ಬಂಧಿಸಿದ್ದರು ಎಂದು ವರದಿ ತಿಳಿಸಿದೆ.
Next Story





