ದ್ವಿತೀಯ ಕ್ರಿಕೆಟ್ ಟೆಸ್ಟ್:ಭಾರತ ಎರಡನೆ ಇನಿಂಗ್ಸ್ನಲ್ಲಿ 213/4

ಹೇಝಲ್ವುಡ್ ಎಸೆತದಲ್ಲಿ ಅಭಿನವ್ ಮುಕುಂದ್ ಬೌಲ್ಡ್ ಆಗಿರುವ ಕ್ಷಣ.
ಬೆಂಗಳೂರು, ಮಾ.7: ಇಲ್ಲಿ ನಡೆಯುತ್ತಿರುವ ದ್ವಿತೀಯ ಕ್ರಿಕೆಟ್ ಟೆಸ್ಟ್ನಲ್ಲಿ ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್ನಲ್ಲಿ 276 ರನ್ಗಳಿಗೆ ನಿಯಂತ್ರಿಸಿದ ಭಾರತ ಎರಡನೆ ಇನಿಂಗ್ಸ್ನಲ್ಲಿ 72 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 213ರನ್ ಗಳಿಸಿದ್ದು, ಸರಣಿಯಲ್ಲಿ ಮೊದಲ ಬಾರಿ ಭಾರತದ ಸ್ಕೋರ್ ದ್ವಿಶತಕದ ಗಡಿ ದಾಟಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರನೆ ದಿನದ ಆಟ ನಿಂತಾಗ ಭಾರತದ ಚೇತೇಶ್ವರ ಪೂಜಾರ 79 ರನ್ ಮತ್ತು ಅಜಿಂಕ್ಯ ರಹಾನೆ 40 ರನ್ ಗಳಿಸಿ ಔಟಾಗದೆ ಕ್ರೀಸ್ನಲ್ಲಿದ್ದರು.
ಪೂಜಾರ ಮತ್ತು ರಹಾನೆ ಮುರಿಯದ ಜೊತೆಯಾಟದಲ್ಲಿ ಐದನೆ ವಿಕೆಟ್ಗೆ 93 ರನ್ಗಳ ಕೊಡುಗೆ ನೀಡಿದ್ದಾರೆ.
ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 51 ರನ್ , ಅಭಿನವ್ ಮುಕುಂದ್ 16ರನ್, ವಿರಾಟ್ ಕೊಹ್ಲಿ 15 ರನ್ ಮತ್ತು ರವೀಂದ್ರ ಜಡೇಜ 2 ರನ್ ಗಳಿಸಿ ಔಟಾಗಿದ್ದಾರೆ.
ಆಸ್ಟ್ರೇಲಿಯದ ಪರ ಹೇಝಲ್ವುಡ್ 57ಕ್ಕೆ 3 ವಿಕೆಟ್ ಮತ್ತು ಓ’ಕೀಫೆ 28ಕ್ಕೆ 1 ವಿಕೆಟ್ ಪಡೆದಿದ್ದಾರೆ.
,,,,,,,,,
Next Story





