Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ.ಜಿಲ್ಲೆಯಲ್ಲಿ ಅನಧಿಕೃತವಾಗಿ 10 ರೂ....

ದ.ಕ.ಜಿಲ್ಲೆಯಲ್ಲಿ ಅನಧಿಕೃತವಾಗಿ 10 ರೂ. ನಾಣ್ಯ ಚಲಾವಣೆ ಸ್ಥಗಿತ !

10 ರೂ. ನಾಣ್ಯ ಅಸಲಿಯೇ? ನಕಲಿಯೇ?

​ಹಂಝ ಮಲಾರ್​ಹಂಝ ಮಲಾರ್6 March 2017 5:45 PM IST
share
ದ.ಕ.ಜಿಲ್ಲೆಯಲ್ಲಿ ಅನಧಿಕೃತವಾಗಿ 10 ರೂ. ನಾಣ್ಯ ಚಲಾವಣೆ ಸ್ಥಗಿತ !

ಮಂಗಳೂರು, ಮಾ.6: ದ.ಕ.ಜಿಲ್ಲೆಯಲ್ಲಿ 10 ರೂ.ನಾಣ್ಯವು ಕಳೆದ 2 ವಾರದಿಂದ ಅನಧಿಕೃತವಾಗಿ ಚಲಾವಣೆ ಸ್ಥಗಿತಗೊಂಡಿದೆ. ಇದರಿಂದ 500 ಮತ್ತು 1,000 ರೂ. ನೋಟುಗಳ ಅಮಾನ್ಯದಿಂದ ತತ್ತರಿಸಿದ್ದ ಸಾರ್ವಜನಿಕರು ಮತ್ತೆ ಗೊಂದಲಕ್ಕೀಡಾಗಿದ್ದಾರೆ.

ಬಸ್, ರಿಕ್ಷಾವಲ್ಲದೆ ಅಂಗಡಿಮುಂಗಟ್ಟುಗಳಲ್ಲೂ ಕೂಡ 10 ರೂ. ನಾಣ್ಯವನ್ನು ಸ್ವೀಕರಿಸಲಾಗುತ್ತಿಲ್ಲ. ಗ್ರಾಹಕರು ಕೊಟ್ಟರೆ ಬಸ್-ರಿಕ್ಷಾ, ಅಂಗಡಿ ವ್ಯಾಪಾರಿಗಳು ತಿರಸ್ಕರಿಸುವ ವಿದ್ಯಮಾನ ಒಂದೆಡೆಯಾದರೆ, ಬಸ್-ರಿಕ್ಷಾ, ಅಂಗಡಿ ವ್ಯಾಪಾರಿಗಳು ಕೊಟ್ಟರೆ ಗ್ರಾಹಕರು ಸ್ವೀಕರಿಸದಂತಹ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಯಾರಿಗೆ ಯಾರು ಉತ್ತರಿಸಬೇಕು ಎಂಬ ಪ್ರಶ್ನೆ ಎದುರಾಗಿದೆ. ಈ ವಿಷಯದಲ್ಲಿ ಕೆಲವು ಬಸ್‌ಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಮಧ್ಯೆ ಮಾತಿನ ಚಕಮಕಿ ನಡೆದ ಉದಾಹರಣೆಯೂ ಇದೆ.

10 ರೂ. ನಾಣ್ಯವನ್ನು ಬಸ್‌ಗಳಲ್ಲಿ ಸಿಬ್ಬಂದಿ ವರ್ಗ ಸ್ವೀಕರಿಸದ ಕಾರಣ ಪ್ರಯಾಣಿಕರು ಅತಂತ್ರರಾಗಿದ್ದಾರೆ. ಅಷ್ಟೇ ಅಲ್ಲ, ತಾವು ಶೇಖರಿಸಿಟ್ಟ 10 ರೂ. ನಾಣ್ಯಗಳನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಜಾತ್ರೆ, ಉರೂಸ್, ಕಾಣಿಕೆ ಡಬ್ಬಗಳಿಗೆ ಹರಕೆ ರೂಪದಲ್ಲಿ ಸಂದಾಯ ಮಾಡುತ್ತಿದ್ದಾರೆ.

ಚಿಲ್ಲರೆ ಮತ್ತು ರಖಂ ಅಂಗಡಿಗಳಲ್ಲೂ ಕೂಡ 10 ರೂ. ನಾಣ್ಯವನ್ನು ಅನಧಿಕೃತವಾಗಿ ಚಲಾವಣೆ ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲೂ ಕೂಡ 10 ರೂ. ನಾಣ್ಯ ಸ್ವೀಕರಿಸುತ್ತಿಲ್ಲ. ಹಾಗಾಗಿ ಗ್ರಾಹಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಎಲ್ಲಿ ಹೋದರೂ 10 ರೂ.ನಾಣ್ಯ ಬೇಡ ಎಂಬ ಮಾತು ಕೇಳಿ ಬರುತ್ತಿವೆ. ಇದರಿಂದ ವ್ಯವಹಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಆದರೆ, ಯಾರಿಗೂ ಯಾವ ಕಾರಣಕ್ಕೆ 10 ರೂ.ನಾಣ್ಯ ಚಲಾವಣೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಅಂದಹಾಗೆ, ಈ ನಾಣ್ಯವನ್ನು ಆರ್‌ಬಿಐ ನಿಷೇಧಿಸಿಲ್ಲ. ಆದರೆ ಕೆಲವು ಬ್ಯಾಂಕ್ ಸಿಬ್ಬಂದಿ ವರ್ಗ ಎಣಿಸುವ ರಗಳೆಯಿಂದ ದೂರ ಉಳಿಯುವುದಕ್ಕಾಗಿ ಸ್ವೀಕರಿಸಲು ಹಿಂದೇಟು ಹಾಕಿದೆ ಎನ್ನಲಾಗಿದೆ. ಬ್ಯಾಂಕ್‌ಗಳೇ ಸ್ವೀಕರಿಸದ್ದನ್ನು ಸಹಜವಾಗಿ ನಂಬಿದ ಗ್ರಾಹಕರು 10 ರೂ. ನಾಣ್ಯ ನಿಷೇಧವಾಗಿದೆ ಎಂದು ಭಾವಿಸಿದ್ದಾರಲ್ಲದೆ, ಮಾತಿನ ಮಧ್ಯೆ ಅದನ್ನು ತೇಲಿಬಿಟ್ಟಿದ್ದಾರೆ. ಇದು ಎಲ್ಲೆಡೆ ಫೋಬಿಯೋ ಮಾದರಿಯಲ್ಲಿ ಹಬ್ಬಿದ್ದು, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಖೋಟಾ ನಾಣ್ಯ:

ಈ ಮಧ್ಯೆ 10 ರೂ.ನಾಣ್ಯದ 'ಖೋಟಾ' ಚಲಾವಣೆಗೆ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. 2008ರಲ್ಲಿ ಹೊರತರಲಾದ 10 ರೂ. ನಾಣ್ಯದಲ್ಲಿ 'ರೂ.' ಚಿಹ್ನೆ ಇಲ್ಲ ಮತ್ತು ಮೇಲ್ಭಾಗದಲ್ಲಿ 15 ಗೆರೆಗಳಿವೆ. 2015ರಲ್ಲಿ ಹೊರತರಲಾದ 10 ರೂ.ನಾಣ್ಯದಲ್ಲಿ 'ರೂ.' ಚಿಹ್ನೆ ಮತ್ತು ಮೇಲ್ಭಾಗದಲ್ಲಿ 10 ಗೆರೆಗಳಿವೆ. ಅಂದರೆ, ಒಂದೇ ಮುಖಬೆಲೆಯ 2 ನಾಣ್ಯದ ಈ ವ್ಯತ್ಯಾಸವನ್ನೇ ಮುಂದಿಟ್ಟುಕೊಂಡು ಹಲವರು 10 ರೂ. ನಾಣ್ಯ 'ಖೋಟಾ' ಆಗಿದೆ ಎಂದು ಹೇಳಿಕೊಳ್ಳತೊಡಗಿದ್ದಾರೆ. ಆದರೆ, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಲ್ಲಿ ಯಾವುದೇ ಮಾಹಿತಿ ಇಲ್ಲ.

 ನಮಗೆ 10 ರೂ. ನಾಣ್ಯ ಸ್ವೀಕರಿಸಬಾರದು ಎಂದು ಆರ್‌ಬಿಐ ಹೇಳಲಿಲ್ಲ. ಅದನ್ನು ಸ್ವೀಕರಿಸಬೇಕು ಎಂದು ಸೂಚನೆ ನೀಡಿದೆ. ಇನ್ನು 10 ರೂ. ನಾಣ್ಯ 'ನಕಲಿ' ಬಗ್ಗೆ ಮಾಹಿತಿ ಇಲ್ಲ. ನಾಣ್ಯಗಳ ವ್ಯತ್ಯಾಸದ ಬಗ್ಗೆಯೂ ನಮ್ಮಲ್ಲಿ ಗೊಂದಲಗಳಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬ್ಯಾಂಕ್ ವ್ಯವಸ್ಥಾಪಕರೊಬ್ಬರು 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ 10 ರೂ.ನಾಣ್ಯವು ಅನಧಿಕೃತವಾಗಿ ಸ್ಥಗಿತಗೊಂಡಿದ್ದು, ಇದಕ್ಕೆ ಬ್ಯಾಂಕ್‌ಗಳ ಶಾಖಾ ಕಚೇರಿ, ಬಸ್-ರಿಕ್ಷಾ, ಅಂಗಡಿ ಮುಂಗಟ್ಟು ಸಹಿತ ಎಲ್ಲೆಡೆ ಜಾಗೃತಿ ಮೂಡಿಸುವ ಅಗತ್ಯವಿದೆ.

share
​ಹಂಝ ಮಲಾರ್
​ಹಂಝ ಮಲಾರ್
Next Story
X