ಬಂಡೀಪುರ: ಹುಲಿ ದಾಳಿಗೆ ಆನೆ ಮರಿ ಬಲಿ

ಗುಂಡ್ಲುಪೇಟೆ.ಮಾ.6: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಮರಿಯಾನೆಯೊಂದು ಬಲಿಯಾಗಿರುವ ಘಟನೆ ನಡೆದಿದೆ.
ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ಸುಮಾರು 1 ವರ್ಷ 2 ತಿಂಗಳ ಆನೆಯ ಗಂಡು ಮರಿ ಹುಲಿ ದಾಳಿಗೆ ತುತ್ತಾಗಿರುವುದು ಮಾ.6ರಂದು ಗಸ್ತು ನಡೆಸುತ್ತಿದ್ದ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದೆ.
ಪಶುವೈದ್ಯರೊಂದಿಗೆ ಸ್ಥಳಕ್ಕೆ ತೆರಳಿದ ವಲಯಾರಣ್ಯಾಧಿಕಾರಿ ಶಿವಾನಂದ ಮಗ್ದುಂ, ಡಿಆರ್ ಎಫ್ ಓ ಶಬ್ಬೀರ್, ಗಾರ್ಡ್ ನವೀನ್ ಹಾಗೂ ಇತರರು ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಸಂಸ್ಕಾರ ಮಾಡಿದರು.
ಆನೆಯ ಕುತ್ತಿಗೆಯ ಭಾಗದಲ್ಲಿ ಹುಲಿಯು ಕಚ್ಚಿರುವ ಗುರುತುಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





