ಹಳೆಯ ನೋಟುಗಳ ಠೇವಣಿ: ಕೇಂದ್ರ, ಆರ್‌ಬಿಐಗೆ ಸುಪ್ರೀಂ ನೋಟಿಸ್

ಹೊಸದಿಲ್ಲಿ,ಮಾ.6: ಹಳೆಯ ನೋಟುಗಳನ್ನು ಜಮಾ ಮಾಡಲು ಮಾ.31ರವರೆಗೆ ಅವಕಾಶವಿದೆ ಎಂದು ಜನರಿಗೆ ಭರವಸೆ ನೀಡಲಾಗಿದ್ದರೂ ಅವರಿಂದ ಠೇವಣಿಗಳನ್ನು ಸ್ವೀಕರಿಸಲಾಗುತ್ತಿಲ್ಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರ ಮತ್ತು ಆರ್‌ಬಿಐಗೆ ನೋಟಿಸುಗಳನ್ನು ಹೊರಡಿಸಿದ್ದು, ಶುಕ್ರವಾರದೊಳಗೆ ಉತ್ತರಿಸುವಂತೆ ನಿರ್ದೇಶ ನೀಡಿದೆ.
ಶರದ್ ಮಿಶ್ರಾ ಎನ್ನುವವರು ಈ ಸಲ್ಲಿಸಿರುವ ಈ ಅರ್ಜಿಯಲ್ಲಿ, ಜನರು ಡಿ.31ರ ನಂತರವೂ ತಮ್ಮ ಬಳಿಯಿರುವ ಹಳೆಯ ನೋಟುಗಳನ್ನು ಮಾ.31,2017ರವರೆಗೂ ಅಗತ್ಯ ವಿವರಗಳೊಂದಿಗೆ ರಿಜರ್ವ್ ಬ್ಯಾಂಕಿನ ನಿರ್ದಿಷ್ಟ ಶಾಖೆಗಳಲ್ಲಿ ಜಮಾ ಮಾಡಬಹುದಾಗಿದೆ ಎಂಬ ಭರವಸೆಯನು ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನ.8ರ ಭಾಷಣ ಮತ್ತು ನಂತರ ಆರ್‌ಬಿಐ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಸ್ತಾಪಿಸಲಾಗಿದೆ.
ನೋಟು ಅಮಾನ್ಯದ ನಿಗದಿತ ಅವಧಿಯಲ್ಲಿ ಭಾರತದಿಂದ ಹೊರಗಿದ್ದವರಿಗೆ ಮಾತ್ರ ಮಾ.3ರವರೆಗೆ ಹಳೆಯ ನೋಟುಗಳನ್ನು ಜಮಾ ಮಾಡಲು ಅನುಮತಿ ನೀಡಿರುವುದು ಪ್ರಧಾನಿ ಮತ್ತು ಆರ್‌ಬಿಐ ಭರವಸೆಗಳ ಉಲ್ಲಂಘನೆಯಾಗಿದೆ ಎಂದೂ ಮುಖ್ಯ ನ್ಯಾ.ಜೆ.ಎಸ್.ಖೇಹರ್ ಅವರ ನೇತೃತ್ವದ ಪೀಠವು ಪರಿಗಣಿಸಿದೆ.