'ಸುಲ್ತಾನ್ ಪರ್ಫ್ಯೂಮ್ ಆ್ಯಂಡ್ ಕಾಸ್‌ಮೆಟಿಕ್ಸ್' ಉದ್ಘಾಟನೆ

ಮಂಗಳೂರು, ಮಾ.6: ಇಂಟರ್‌ನ್ಯಾಷನಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಅಧೀನದ ನೂತನ ಮಳಿಗೆ 'ಸುಲ್ತಾನ್ ಪರ್ಫ್ಯೂಮ್ ಆ್ಯಂಡ್ ಕಾಸ್‌ಮೆಟಿಕ್ಸ್' ನಗರದ ಸ್ಟೇಟ್‌ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯ ಪೊಯಿನೀರ್ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿಯಾರ್ ನೂತನ ಮಳಿಗೆಯನ್ನು ಉದ್ಘಾಟಿಸಿ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಇಖ್ಲಾಸ್ ಇಂಟರ್‌ನ್ಯಾಷನಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ ಮಾಲಕ ಎಂ.ಎಸ್.ಶಬೀರ್ ಅಹ್ಮದ್, ಪಾಲುದಾರ ಎಂ.ಕೆ.ಮೂಸಾ, ಮುಹಮ್ಮದ್ ಶಾರೂಖ್ ಸುಲ್ತಾನ್ ಮುಂಬೈ ಮೊದಲಾದವರು ಉಪಸ್ಥಿತರಿದ್ದರು.
ಮಳಿಗೆಯಲ್ಲಿ ವಿವಿಧ ರೀತಿಯ ಸುಗಂಧ ದ್ರವ್ಯಗಳು ಮಾರಾಟಕ್ಕಿವೆ. ಊಡ್, ಅಂಬರ್, ಮುಶ್ಕ್, ಸಿಂತೆಟಿಕ್ ಅತ್ತರ್ ಮತ್ತು ಕಾಸ್ಮೆಟಿಕ್ಸ್ ಮಾರಾಟಕ್ಕಿವೆ.
Next Story





