ಸ್ಮಾರ್ಟ್ ಸಿಟಿ ರೇಸ್‌ನಲ್ಲಿ ಹಿಂದುಳಿದ ದಾವಣಗೆರೆ,ಬೆಳಗಾವಿ

ಹೊಸದಿಲ್ಲಿ,ಮಾ.6: ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ನಾಗಪುರ ಮತ್ತು ಇಂದೋರ ಇಡೀ ದೇಶದಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದಿದ್ದರೆ, ಕರ್ನಾಟಕದ ದಾವಣಗೆರೆ ಮತ್ತು ಬೆಳಗಾವಿ ಹಿಂದೆ ಬಿದ್ದಿವೆ.
2016,ಜನವರಿಯಲ್ಲಿ ಪ್ರಕಟಿಸಲಾಗಿದ್ದ 20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ದಕ್ಷಿಣ ಭಾರತದ ಇತರ ಐದು ನಗರಗಳಾದ ಕೊಚ್ಚಿ, ವಿಶಾಖಪಟ್ಟಣಂ, ಕಾಕಿನಾಡಾ, ಕೊಯಮತ್ತೂರು ಮತ್ತು ಚೆನ್ನೈ ಕೂಡ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ಹಿಂದೆ ಬಿದ್ದಿವೆ ಎಂದು ನಗರಾಭಿವೃದ್ಧಿ ಸಚಿವಾಲಯವು ಹೇಳಿದೆ.
ಸಚಿವಾಲಯವು ಈವರೆಗೆ 60 ನಗರಗಳ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಅನುಮತಿ ನೀಡಿದೆ. 2016 ಜನವರಿಯಲ್ಲಿ 20 ನಗರಗಳನ್ನು ಪ್ರಕಟಿಸಲಾಗಿದ್ದರೆ, ಮೇ ತಿಂಗಳಲ್ಲಿ 13 ಮತ್ತು ಸೆಪ್ಟೆಂಬರ್‌ನಲ್ಲಿ 27 ನಗರಗಳನ್ನು ಪ್ರಕಟಿಸಲಾಗಿತ್ತು.
Next Story





